Connect with us

Corona

ಪಾಸಿಟಿವ್ ಇದೆ ನಿಂತ್ಕೊಳ್ಳಿ ಅಂದ್ರು ಬೈಕ್ ಹತ್ತಿ ಹೊರಟ ಯುವತಿ

Published

on

ಮೈಸೂರು: ನಿಮಗೆ ಕೊರೊನಾ ಪಾಸಿಟಿವ್ ಇದೆ ನಿಂತ್ಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿ ಹೇಳುತ್ತಿದ್ದರೂ ಯುವತಿ ಬೈಕ್ ಹತ್ತಿ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಇಂದು ಉದಯಗಿರಿಯ ಕ್ಯೂಬಾ ಮಸೀದಿ ಬಳಿ ಆರೋಗ್ಯ ಸಿಬ್ಬಂದಿ ರ‍್ಯಾಂಡಮ್ ಟೆಸ್ಟ್ ಮಾಡುತ್ತಿದ್ದರು. ಈ ವೇಳೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಯುವತಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿತ್ತು. ಸಿಬ್ಬಂದಿ ನಿಲ್ಲುವಂತೆ ಹೇಳುತ್ತಿದ್ದರೂ ಯುವತಿ ಯಾರ ಮಾತನ್ನ ಲೆಕ್ಕಿಸದೇ ಬೈಕ್ ಏರಿ ಹೋಗಿದ್ದಾಳೆ.

ಆರೋಗ್ಯ ಸಿಬ್ಬಂದಿ ನಿಮ್ಮ ಮೇಲೆ ಪ್ರಕರಣ ದಾಖಲಾಗುತ್ತೆ ಅಂತ ಎಚ್ಚರಿಕೆ ನೀಡಿದ್ರೂ ಯುವತಿ ಯಾರ ಮಾತನ್ನು ಕೇಳಿಲ್ಲ. ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸಮುದಾಯಿಕ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಎನ್.ಆರ್.ಪುರ ಕ್ಷೇತ್ರದ ಜನತೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *