ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಗುಂಡು, ತುಂಡಿನ ಪಾರ್ಟಿ ಮಾಡಿದ್ದ ಶ್ರೀರಾಮುಲು ಆಪ್ತ ಅಮಾನತು

ಗದಗ: ಕೋವಿಡ್ ಸಂದರ್ಭದಲ್ಲಿ ಭರ್ಜರಿಯಾಗಿ ಗುಂಡು-ತುಂಡಿನ ಪಾರ್ಟಿ ಮಾಡಿದ್ದ ಸಚಿವ ಶ್ರೀರಾಮುಲು ಆಪ್ತ ಸಹಾಯಕನನ್ನು ಅಮಾನತು ಮಾಡಲಾಗಿದೆ.

ಶ್ರೀರಾಮುಲು ಆಪ್ತಸಹಾಯಕ ಗದಗ ಶ್ರೀನಿವಾಸ್ ಭವನದಲ್ಲಿ ಬರ್ತ್ ಡೇ ಪಾರ್ಟಿ ಮಾಡಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿನಲ್ಲಿ ವಿಸ್ತೃತ ಸುದ್ದಿ ಪ್ರಸಾರ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತ ಬಿಜೆಪಿ ಪಕ್ಷ ಈಗ ಶ್ರೀರಾಮುಲು ಆಪ್ತ ಸಹಾಯನನ್ನು ಪಕ್ಷದಿಂದ ಅಮಾನತು ಮಾಡಿದೆ. ಶಿವನಗೌಡ ಕಾನೂನು ಉಲ್ಲಂಘಿಸಿ ಗದಗನಲ್ಲಿ ಅದ್ಧೂರಿಯಾಗಿ ಬರ್ತ್ ಡೇ ಪಾರ್ಟಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಗದಗ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಆದೇಶ ಹೊರಡಿಸಿದ್ದಾರೆ.

- Advertisement -

ಕಳೆದ 2 ದಿನಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ 144 ಸೆಕ್ಷನ್ ಉಲ್ಲಂಘಿಸಿ ನಗರದ ಶ್ರೀನಿವಾಸ ಭವನದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ಪಾನಮತ್ತರಾಗಿ ಕುಣಿದು ಕುಪ್ಪಳಿಸಿದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಈ ವಿಚಾರ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದ್ದು, ತಮ್ಮ ಈ ವರ್ತನೆಯಿಂದ ಪಕ್ಷದ ಹಾಗೂ ಪಕ್ಷದ ನಾಯಕರು ಸಾಕಷ್ಟು ಮುಜುಗುರ ಪಡಬೇಕಾಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಪಕ್ಷ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮನ್ನು ಪಕ್ಷದಿಂದ ಅಮಾನತುಗೊಳಿಸಿದೆ ಎಂದು ಎಸ್.ಎಚ್. ಶಿವನಗೌಡರಿಗೆ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

- Advertisement -

ಪಾರ್ಟಿ
ಗದಗದ ಶ್ರೀನಿವಾಸ ಭವನದಲ್ಲಿ ಬಿಜೆಪಿ ಮುಖಂಡ ಶಿವನಗೌಡ ಎಸ್.ಎಚ್ ಅವರು ಹುಟ್ಟುಹಬ್ಬದ ಪ್ರಯುಕ್ತ ಗುಂಡು ತುಂಡು ಪಾರ್ಟಿ ಆಯೋಜಿಸಿದ್ದರು. ಕೊವಿಡ್ ನಡುವೆಯೇ ಅದ್ಧೂರಿ ಬರ್ತ್ ಡೇ ಮಾಡಿಕೊಳ್ಳುವ ಮೂಲಕ ಸಚಿವ ಆಪ್ತ 144 ಸೆಕ್ಷನ್ ಉಲ್ಲಂಘನೆ ಮಾಡಿದ್ದರು.

ಇತ್ತ ಪಾರ್ಟಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮರೆತು ನೂರಾರು ಮಂದಿ ಭಾಗಿಯಾಗಿದ್ದರು. ಎಣ್ಣೆಯ ಗಮ್ಮತ್ತಿನಲ್ಲಿ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ನಿಷೇಧಾಜ್ಞೆ ನಡುವೆಯೇ ಸಚಿವ ಶ್ರೀರಾಮುಲು ಆಪ್ತ ಬೇಜವಾಬ್ದಾರಿ ತೋರಿದ್ದು, ಸಾರ್ವಜನಿಕರು ಕಿಡಿಕಾರುತ್ತಿದ್ದರು.

- Advertisement -