ರೋಮ್: ಹೆಂಡತಿ ಜೊತೆ ಜಗಳ ಮಾಡಿಕೊಂಡು ಕೋಪ ಕಡಿಮೆ ಮಾಡಿಕೊಳ್ಳಲು ಪತಿ 280 ಕಿ.ಮೀ ಕಾಲ ನಡೆದಿರುವ ಪ್ರಸಂಗ ಇಟಲಿಯಲ್ಲಿ ನಡೆದಿದೆ.
ಹೆಂಡತಿ ಜೊತೆಗೆ ಜಗಳ ಮಾಡಿಕೊಂಡು 48 ವರ್ಷದ ವ್ಯಕ್ತಿಯೊಬ್ಬ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ಮನೆಯಿಂದ ಕಾಲ್ ನಡಿಗೆಯಲ್ಲಿ 250 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿದ್ದಾನೆ.
Advertisement
Advertisement
ಇಟಲಿಯಲ್ಲಿ ಕೊರೋನಾ ವೈರಸ್ ಲಾಕ್ಡೌನ್ ಇದ್ದ ಕಾರಣ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೂ ನೈಟ್ ಕಫ್ರ್ಯೂ ಜಾರಿಯಲ್ಲಿದೆ. ರಾತ್ರಿ ಈತ ನಡೆದುಕೊಂಡು ಹೋಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆಗ ಪೊಲೀಸರು ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿ ಒಂದು ಹೋಟೆಲ್ನಲ್ಲಿ ಉಳಿಸಿದ್ದರು. ನಂತರ ಮನೆಗೆ ಹಿಂದಿರುಗಿ ಬಂದು ಈತ ನಡೆದಿರುವ ಘಟನೆಯನ್ನು ಹಂಚಿಕೊಂಡಿದ್ದಾನೆ.
Advertisement
Advertisement
ಲಂಬಾರ್ಡಿಯಾದ ನನ್ನ ಮನೆಯಿಂದ ಬೊಲೋನಾ ಮಾರ್ಗವಾಗಿ ನಡೆದುಕೊಂಡು ಹೋಗಿದ್ದೆ. ಫಾನೋ ಎಂಬಲ್ಲಿ ಪೊಲೀಸರು ನನ್ನನ್ನು ತಡೆದರು. ಮಾರ್ಗ ಮಧ್ಯೆ ಭೇಟಿಯಾದವರು ನನಗೆ ತಿನ್ನಲು ಊಟ ನೀರು ಕೊಟ್ಟರು. ನಾನು ಪತ್ನಿಯ ಮೇಲಿರುವ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಲು ನಡೆದುಕೊಂಡು ಹೋಗಿದ್ದೆ. ದಿನಕ್ಕೆ 40 ಮೈಲಿ ನಡೆಯುತ್ತಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಇತ್ತ ಪತ್ನಿ, ತನ್ನ ಪತಿ ಕಾಣುತ್ತಿಲ್ಲ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಳು.