– ಅಂಗನವಾಡಿ ಕಾರ್ಯಕರ್ತೆ, ಪತಿಯಿಂದ ಕೃತ್ಯ
ಪಾಟ್ನಾ: ನೆರೆದಿದ್ದ ಜನರ ಮುಂದೆಯೇ ಮಹಿಳೆಯೊಬ್ಬರ ಬಟ್ಟೆ ಬಿಚ್ಚಿ, ಥಳಿಸಿದಲ್ಲದೇ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯೊಂದು ಬಿಹಾರದ ಮುಜಾಫರ್ಪುರದ ಅಂಧ್ರತಡಿ ಎಂಬಲ್ಲಿ ನಡೆದಿದೆ.
ಮಹಿಳೆಗೆ ಥಳಿಸಿ, ಮೆರವಣಿಗೆ ಮಾಡಿದ್ದಲ್ಲದೆ ಅದನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಿಂದ ನೊಂದ ಮಹಿಳೆ ಪೊಲೀಸರ ಬಳಿ ದೂರು ನೀಡಲು ಹೋದರೆ, ಪ್ರಕರಣ ಸಂಬಂದ ಪೊಲೀಸರು ಎಫ್ಐಅರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.
Advertisement
ಅಂಗನವಾಡಿ ಕಾರ್ಯಕರ್ತೆ ಲೀಲಾದೇವಿ, ಆಕೆಯ ಪತಿ ಮೋತಿ ಮೆಹ್ತಾ ಹಾಗೂ ಗ್ರಾಮದ ಕೆಲ ವ್ಯಕ್ತಿಗಳು ಕ್ಲುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
Advertisement
Advertisement
ತನ್ನ ಮೇಲೆ ಹಲ್ಲೆ ನಡೆಸಿದಾಗ ಮಹಿಳೆ ಲೀಲಾ ಹಾಗೂ ಆಕೆಯ ಪತಿ ವಿರುದ್ಧ ವಾಗ್ದಾಕ್ಕಿಳಿದಿದ್ದಾಳೆ. ಅಲ್ಲದೆ ಈ ಸಂಬಂಧ ಮಹಿಳೆ ಪೊಲೀಸರ ಬಳಿ ತೆರಳಿ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾಳೆ.
Advertisement
ಮಹಿಳೆ ಪೊಲೀಸರಿಗೆ ದೂರು ನೀಡಿದ್ದರಿಂದ ಸಿಟ್ಟುಗೊಂಡ ಲೀಲಾ, ಮಹಿಳೆಯ ಮನೆ ಬಳಿ ಗ್ರಾಮಸ್ಥರು ಸೇರುವಂತೆ ಹೇಳಿದ್ದಾಳೆ. ಅಲ್ಲದೆ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮಹಿಳೆಯ ಸುತ್ತ ನೆರೆದ ಗ್ರಾಮಸ್ಥರು ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಇಷ್ಟು ಮಾತ್ರವಲ್ಲದೆ ಲೀಲಾ ಹಾಗೂ ಗ್ರಾಮಸ್ಥರು ಸೇರಿ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಚೆನ್ನಾಗಿ ಥಳಿಇದ್ದಾರೆ. ಈ ವೇಳೆ ಆರೋಪಿ ಲೀಲಾ, ಮಹಿಳೆಯ ಬಟ್ಟೆ ಬಿಚ್ಚಿ ನಂತರ ಮೆರವಣಿಗೆ ಮಾಡಿದ್ದಾಳೆ. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಆರೋಪಿ ಲೀಲಾ ಸೇರಿ 13 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.