ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು – ಯಶ್

ಬೆಂಗಳೂರು: ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಯಶ್ ಹೇಳಿದ್ದಾರೆ.
ಯಶ್ ಅಭಿಮಾನಿಗಳಿಗೆ ಈ ವಿಶೇಷ ಧನ್ಯವಾದ ಹೇಳಲು ಕಾರಣವಿದೆ. 6 ತಿಂಗಳ ಹಿಂದೆ ಜನವರಿ 7 ರಂದು ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಗಿತ್ತು. ಈಗ ಈ ಟೀಸರ್ ಒಟ್ಟು 20 ಕೋಟಿ ವೀಕ್ಷಣೆ ಕಂಡಿದೆ. ಹೀಗಾಗಿ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
Thank you all for your overwhelming response 🙏
▶️https://t.co/9x1GRMGD8N#KGF2Teaser200MViews@TheNameIsYash @prashanth_neel @VKiragandur @hombalefilms @duttsanjay @TandonRaveena@SrinidhiShetty7 @excelmovies @AAFilmsIndia @VaaraahiCC @PrithvirajProd @DreamWarriorpic pic.twitter.com/cT4SXmsOoW
— Yash (@TheNameIsYash) July 16, 2021
20 ಕೋಟಿ ವೀಕ್ಷಣೆ ಕಂಡ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ 22 ಸೆಕೆಂಡಿನ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ 22 ಸೆಕೆಂಡ್ ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಆಡಿಯೋ ಹಕ್ಕು ಮಾರಾಟದಲ್ಲಿ ಬಾಹುಬಲಿಯನ್ನ ಹಿಂದಿಕ್ಕಿದ ಕೆಜಿಎಫ್-2
Thank you everyone for the thundering response!!!https://t.co/4PzV1fc4uk#KGF2Teaser200MViews pic.twitter.com/dsByWfRaX5
— Prashanth Neel (@prashanth_neel) July 16, 2021
ಒಟ್ಟು 2 ನಿಮಿಷ 16 ಸೆಕೆಂಡ್ ಇರುವ ಕೆಜಿಎಫ್ ಟೀಸರ್ ಗೆ 84 ಲಕ್ಷ ಲೈಕ್ ಸಿಕ್ಕಿದರೆ, 98 ಸಾವಿರ ಕಮೆಂಟ್ ಬಂದಿದೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.
ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ. ಚಿತ್ರ ತಂಡ ಯಾವಾಗ ಚಿತ್ರ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿಸಿಲ್ಲ.
ಟೀಸರ್ ನಲ್ಲಿ ರಾಕಿ ಬಾಯ್ ಯಶ್, ಅಧೀರ ಸಂಜಯ್ ದತ್, ರಮೀಕಾ ಸೇನ್ ರವೀನಾ ಟಂಡನ್, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್ ಮಷಿನ್ ಗನ್ನಿಂದ ಜೀಪುಗಳ ಮೇಲೆ ಫೈರ್ ಮಾಡಿದ್ದು ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್ ಮಾಡಿದ ಕೆಂಪಾದ ಗನ್ನಿಂದ ರಾಕಿ ಸಿಗರೇಟ್ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.