ಕಾರವಾರ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಹೆಸರು ಈಗ ಫೇಮಸ್. ಅವರ ಹೆಸರಿಟ್ಟುಕೊಂಡವರಿಗೂ ಇದೀಗ ಅದೃಷ್ಟ ಖುಲಾಯಿಸಿದ್ದು, ನೀರಜ್ ಎಂಬ ಹೆಸರಿನವರಿಗೆ ಈ ಹೋಟೆಲಿನಲ್ಲಿ ಫ್ರೀ ಆಹಾರ ನೀಡಲಾಗುತ್ತಿದೆ.
Advertisement
ಹೌದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್ನಲ್ಲಿ ಈ ವಿಶೇಷ ಆಫರ್ ನೀಡಲಾಗಿದೆ. ನೀರಜ್ ಎಂಬ ಹೆಸರಿನ ಯಾರೇ ಬಂದರೂ ಉಚಿತವಾಗಿ ಊಟ ನೀಡಲಾಗುತ್ತಿದೆ. ಅಲ್ಲದೆ ಈ ಹೋಟೆಲ್ ನಲ್ಲಿ ಸಿಗುವ ಯಾವ ಪದಾರ್ಥಗಳನ್ನು ಆರ್ಡರ್ ಮಾಡಿದರೂ ಉಚಿತವಾಗಿ ತಿಂದು ಹೋಗಬಹುದಾಗಿದೆ. ಈ ಆಫರ್ ಆಗಸ್ಟ್ 15ರ ವರೆಗೂ ಇರಲಿದೆ.
Advertisement
Advertisement
ಇತ್ತೀಚೆಗೆ ಆರಂಭಗೊಂಡ ತ್ರಾಮ ಹೋಟೆಲ್ ಮಾಲೀಕ ಆಶೀಶ್ ನಾಯಕ ಮಾತನಾಡಿ, ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದೇವೆ. ಚಿನ್ನ ಗೆದ್ದಿರುವ ನೀರಜ್ ಅದ್ವಿತೀಯ ಸಾಧನೆಗೆ ಮನಸೋತಿದ್ದೇನೆ. ನೀರಜ್ ಹೆಸರಿನ ಗ್ರಾಹಕರು ನಮ್ಮ ಹೋಟೆಲ್ಗೆ ಬಂದು ಅವರಿಗೆ ಇಷ್ಟವಾದ ಯಾವುದೇ ಆಹಾರ ಪಡೆದರೂ ಉಚಿತವಾಗಿದೆ. ಇದು ನಮ್ಮ ಜಿಲ್ಲೆಯಿಂದ ಕ್ರೀಡಾಪಟುವಿಗೆ ಸಲ್ಲಿಸುವ ಗೌರವ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ನೀರಜ್ ಹೆಸರಿನವರಿಗೆ ಉಚಿತ ಪೆಟ್ರೋಲ್ ಕೊಟ್ಟ ಬಂಕ್ ಮಾಲೀಕ!
Advertisement
ಈ ಹಿಂದೆ ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ತೆರಳುವ ರೋಪ್ ವೇನಲ್ಲಿ ಕೂಡ ನೀರಜ್ ಹೆಸರಿನವರಿಗೆ ಉಚಿತವಾಗಿ ಪ್ರಯಾಣಿಸಬಹುದಾದ ವಿಶೇಷ ಆಫರ್ ನೀಡಲಾಗಿತ್ತು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಮತ್ತು ಹಾಕಿಯಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ವಂದನಾ ಕಟಾರಿಯಾ ಅವರಿಗೆ ರೋಪ್ ವೇ ನಿರ್ವಹಣಾ ಕಂಪನಿ ವಿಶೇಷವಾಗಿ ಗೌರವ ಸಲ್ಲಿಸಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ
ಇತ್ತ ಗುಜರಾತ್ ನ ಭರೂಚ್ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ಕೂಡ ವಿಶೇಷ ಆಫರ್ ನೀಡಿ ಸುದ್ದಿಯಾಗಿದ್ದರು. ನೀರಜ್ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವ ಮೂಲಕ ನೀರಜ್ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ್ದರು. ಇದನ್ನೂ ಓದಿ: ನಿಮ್ಮ ಹೆಸರು ನೀರಜ್, ವಂದನಾ ಆಗಿದ್ರೆ ರೋಪ್ ವೇ ಸೇವೆ ಉಚಿತ