ಸಂಜೆ ವೇಳೆ ಟೀ/ ಕಾಫಿ ಜೊತೆಗೆ ಏನಾದರೂ ಕುರುಕಲು ತಿಂಡಿ ಬೇಕು ಎಂದು ನಾಲಿಗೆ ಬಯಸುತ್ತದೆ. ಈರುಳ್ಳಿ ಪಕೋಡ, ಆಲೂಗಡ್ಡೆ, ಮೆಣಸಿನಕಾಯಿ ಬಜ್ಜಿ ತಿಂದಿರುತ್ತೀರಾ. ಆದರೆ ಇಂದು ಮೆಂತೆ ಸೊಪ್ಪಿನ ಪಕೋಡ ಮಾಡಿ ಸವಿಯಿರಿ.
ಹಲವು ಮಂದಿ ರಸ್ತೆ ಬದಿ ಸಿಗುವ ತಿನಿಸುಗಳಿಗೆ ಮಾರು ಹೋಗುತ್ತಾರೆ. ಇದರಿಂದ ಆರೋಗ್ಯ ಕೆಡುತ್ತದೆ ಎಂಬ ಅರಿವಿದ್ದರೂ ಜನ ಅಂತಹ ತಿಂಡಿಗಳನ್ನೇ ತಿನ್ನಲು ಬಯಸುತ್ತಾರೆ. ಅಂಥವರಿಗೆ ಇಲ್ಲಿ ಸುಲಭವಾಗಿ ಹಾಗೂ ರುಚಿಯಾಗಿರುವ ಮೆಂತೆ ಸೊಪ್ಪಿನ ಪಕೋಡ ಮಾಡುವ ಬಗ್ಗೆ ತಿಳಿಸಲಾಗಿದೆ.
Advertisement
Advertisement
ಬೇಕಾಗುವ ಸಾಮಗ್ರಿಗಳು:
* ಮೆಂತೆ ಸೊಪ್ಪು- 3 ಕಪ್
* ಅನ್ನ- 1 ಕಪ್
* ಹಸಿಮೆಣಸಿನಕಾಯಿ- 2
* ಈರುಳ್ಳಿ- 1
* ಇಂಗು- ಚಿಟಿಕೆ
* ಅಚ್ಚಖಾರದ ಪುಡಿ- 1 ಟಿ ಸ್ಪೂನ್
* ಕಡಲೆಹಿಟ್ಟು- 3 ಟಿ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ- 1 ಕಪ್
Advertisement
Advertisement
ಮಾಡುವ ವಿಧಾನ:
* ಅನ್ನ, ಕಡಲೆಹಿಟ್ಟು, ಮೆಂತೆ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿ, ಇಂಗು, ಖಾರದ ಪುಡಿ, ಉಪ್ಪನ್ನು ಒಂದು ಪಾತ್ರೆಗೆ ಹಾಕಿ ಕಲಸಿಕೊಳ್ಳಿ.
* ಪಕೋಡ ಮಾಡುವ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಲು ಅವಶ್ಯವಿರುವಷ್ಟು ನೀರು ಹಾಕಿ ಹಿಟ್ಟನ್ನು ಕಲಸಿಕೊಳ್ಳಿ. ನಂತರ ಇವುಗಳನ್ನು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
* ಇತ್ತ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಯಾಗುತ್ತಿದ್ದಂತೆ ಉಂಡೆಗಳನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
* ಇದೀಗ ರುಚಿಯಾದ ಮೆಂತೆ ಸೊಪ್ಪಿನ ಪಕೋಡ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ರುಚಿಯಾದ ಹಂಚಿನ ದೋಸೆ ಮಾಡುವ ಸುಲಭ ವಿಧಾನ