ಅಹಮದಾಬಾದ್: ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು 3-1 ಅಂತರದಲ್ಲಿ ಗೆದ್ದು ಬಿಗುತ್ತಿದ್ದಂತೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಾಯಕನಾಗಿ ದಿಗ್ಗಜ ನಾಯಕರ ದಾಖಲೆಯನ್ನು ಪುಟಿಗಟ್ಟಿದ್ದಾರೆ.
Advertisement
ಭಾರತ ತಂಡ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಇನ್ನಿಂಗ್ಸ್ ಮತ್ತು 25 ರನ್ ಗಳ ಜಯ ದಾಖಲಿಸುತ್ತಿದ್ದಂತೆ. ನಾಯಕನಾಗಿ ಕೊಹ್ಲಿ ತವರಿನಲ್ಲಿ 23 ನೇ ಗೆಲುವಿನ ನಗೆ ಬಿರಿದರು. ಈ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ಸ್ಟೀವ್ ವ್ಹಾ ಮತ್ತು ವೆಸ್ಟ್ ಇಂಡೀಸ್ ನ ಕ್ಲೈವ್ ಲಾಯ್ಡ್ ಅವರ ದಾಖಲೆಯನ್ನು ಮುರಿದಿದ್ದಾರೆ.
Advertisement
Advertisement
ವಿರಾಟ್ ತವರಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ನಲ್ಲಿ 23ನೇ ಗೆಲುವು ದಾಖಲಿಸುವ ಮೂಲಕ ಸ್ಟೀವ್ ವ್ಹಾ ದಾಖಲೆ ಮುರಿದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರೆ ಮೊದಲ ಸ್ಥಾನದಲ್ಲಿ 30 ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ರಾರಾಜಿಸುತ್ತಿದ್ದಾರೆ. 29 ಗೆಲುವಿನೊಂದಿಗೆ ರಿಕಿ ಪಾಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.
Advertisement
ತವರಿನಲ್ಲಿ 10 ಟೆಸ್ಟ್ ಸರಣಿ ಗೆಲುವಿನೊಂದಿಗೆ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿದೂಗಿಸಿದ್ದಾರೆ.
ನಾಯಕನಾಗಿ ವೆಸ್ಟ್ ಇಂಡೀಸ್ ನಾಯಕ ಕೈವ್ ಲಾಯ್ಡ್ 74 ಟೆಸ್ಟ್ ಪಂದ್ಯಗಳಲ್ಲಿ 36 ಗೆಲುವು ದಾಖಲಿಸಿದ್ದರು. ಆದರೆ ಇದೀಗ ವಿರಾಟ್ ಕೇವಲ 60 ಪಂದ್ಯಗಳಲ್ಲಿ 36 ಟೆಸ್ಟ್ ಗೆಲುವು ದಾಖಲಿಸುವ ಮೂಲಕ ಲಾಯ್ಡ್ ಅವರ ದಾಖಲೆಯನ್ನು ಮುರಿದಿದ್ದಾರೆ.