ನಮ್ಮನ್ನು ನೋಡಿ ಕೊರೊನಾ ಹೆದರಬೇಕು, ಧೈರ್ಯದಿಂದಿರಿ- ಗುಣಮುಖನಾದ ಸೋಂಕಿತ

ತುಮಕೂರು: ಕೊರೊನಾ ಸೋಂಕಿಗೆ ಯಾರೂ ಹೆದರಬಾರದು. ನಮ್ಮನ್ನು ನೋಡಿ ಕೊರೊನಾ ಹೆದರಬೇಕು. ಆ ರೀತಿ ಧೈರ್ಯವಾಗಿರಬೇಕು ಎಂದು ಗುಣಮುಖನಾದ ಸೋಂಕಿತರೊಬ್ಬರು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಡಿಸ್ಚಾರ್ಜ್ ಆದ ಮಧುಗಿರಿ ಮೂಲದ ಯುವಕ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಬಿಡುಗಡೆಗೊಂಡು ಅಂಬ್ಯುಲೆನ್ಸ್ ನಲ್ಲಿ ಮನೆಗೆ ಹೊರಡುವಾಗ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

- Advertisement -

ಕೊರೊನಾ ರೋಗಕ್ಕೆ ಒಳಗಾದಾಗಿಂದ ಗುಣಮುಖವಾಗುವವರೆಗಿನ ತನ್ನ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಪಾಸಿಟಿವ್ ಬಂದ ತಕ್ಷಣ ಯಾರೂ ಹೆದರಬೇಡಿ. ಕೊರೊನಾಗೆ ನಾವು ಹೆದರಬಾರದು, ನಮ್ಮನ್ನು ನೋಡಿ ಅದು ಹೆದರಬೇಕು ಎಂದು ಹೇಳಿಕೊಂಡಿದ್ದಾರೆ.

- Advertisement -

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಕೊಟ್ಟಿದ್ದಾರೆ. ಊಟ ತಿಂಡಿಯೂ ಗುಣಮಟ್ಟದಾಗಿದೆ. ರೋಗಿಗಳು ಹೆದರದೇ ಧೈರ್ಯದಿಂದ ಚಿಕಿತ್ಸೆ ಎದುರಿಸಿ ಎಂದು ಧೈರ್ಯ ತುಂಬಿದ್ದಾರೆ. ಸದ್ಯ ಈ ವೀಡಿಯೋ ಜಿಲ್ಲೆಯಲ್ಲಿ ಓಡಾಡುತ್ತಿದೆ.

- Advertisement -