LatestMain PostNational

ನಡು ರಸ್ತೆಯಲ್ಲಿ 8 ತಿಂಗಳ ಗರ್ಭಿಣಿ ಎಳೆದು ಸರ ಕದ್ದ ಖದೀಮರು

Advertisements

ಚೆನ್ನೈ: ನಡುಬೀದಿಯಲ್ಲಿ 8 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಅಪರಿಚಿತ ವ್ಯಕ್ತಿಗಳು ಚಿನ್ನದ ಸರ ಕದ್ದಿರುವ ಆಘಾತಕಾರಿ ಘಟನೆ ಶುಕ್ರವಾರ ಬೆಳಗ್ಗೆ ಚೆನ್ನೈನ ಪಲ್ಲವರಂನಲ್ಲಿ ನಡೆದಿದೆ.

ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗೀತಾ ಎಂಬ ಮಹಿಳೆಯ ಪಕ್ಕದಲ್ಲಿ ನಿಲ್ಲಿಸಿ, ಸರ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಗೀತಾ ವಿರೋಧಿಸಿದಾಗ, ಸರಗಳ್ಳರು ಆಕೆಯನ್ನು ಜೋರಾಗಿ ರಸ್ತೆ ಮಧ್ಯೆ ತಳ್ಳಾಡುತ್ತಾ ಎಳೆದಾಡಿದ್ದಾರೆ. ಆಗ ಮಹಿಳೆ ಜೋರಾಗಿ ಕೂಗಿದನ್ನು ಕೇಳಿ ಅಲ್ಲಿದ್ದ ನೆರೆಹೊರೆಯವರು ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಆ ಹೊತ್ತಿಗೆ ಸರಗಳ್ಳರು ಸರದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ವೇಳೆ ಗೀತಾಗೆ ಹಾನಿಯಾಗಿದ್ದು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಚಾರವಾಗಿ ಗೀತಾ, ತನ್ನ ತೋಳು ಹಾಗೂ ಕಾಲಿಗೆ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮಹಿಳೆಯ ಪತಿ ರಾಮಚಂದ್ರನ್ ಪಲ್ಲವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಮೊದಲಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ವೀಡಿಯೋ ವೈರಲ್ ಆಗುತ್ತಿದ್ದಂತೆ ಸೋಮವಾರ ಎಫ್‍ಐಆರ್ ದಾಖಲಿಸಿದ್ದಾರೆ.

ಈ ಕುರಿತಂತೆ ತನಿಖೆಯನ್ನು ಚುರುಕುಗೊಳಿಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published.

Back to top button