ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡುವ ಭೀತಿಯಿಂದ ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನ್ಲಾಕ್ ನಿಯಮ ಜಾರಿ ಬಳಿಕ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. ಇದೀಗ ವಿಕೇಂಡ್ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಮಂದಿ ಆಗಮಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು.
Advertisement
ನಂದಿಗಿರಿಧಾಮದ ಸೂರ್ಯೋದಯ ಸೌಂದರ್ಯ ಸವಿಯೋಕೆ ಮುಂಜಾನೆ 4-5 ಗಂಟೆಯಿಂದಲೇ ನಂದಿಗಿರಿಧಾಮದತ್ತ ಪ್ರವಾಸಿಗರ ದಂಡೇ ಆಗಮಿಸಿದೆ. ಆದರೆ ಬೆಳಗ್ಗೆ 8 ಗಂಟೆ ನಂತರ ನಂದಿಗಿರಿಧಾಮಕ್ಕೆ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ಅನುಮತಿ ಇದೆ. ಹೀಗಾಗಿ ಚೆಕ್ ಪೋಸ್ಟ್ ನಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿತ್ತು. ಹೀಗಾಗಿ ಚೆಕ್ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
Advertisement
Advertisement
ಸರಿಸುಮಾರು 4-5 ಕಿಲೋಮೀಟರ್ ದೂರ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿತ್ತು. 8 ಗಂಟೆಗೆ ಚೆಕ್ ಪೋಸ್ಟ್ ಗೇಟ್ ತಡೆದಿದ್ದೆ ತಡ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಡಿದ್ದಾರೆ.
Advertisement
ಮಾರ್ಚ್ 14ರಿಂದ ಲಾಕ್ಡೌನ್ ಆಗಿದ್ದ ನಂದಿಗಿರಿಧಾಮ ಬರೋಬ್ಬರಿ ಐದು ತಿಂಗಳ ನಂತರ ಕೆಲ ದಿನಗಳ ಹಿಂದೆಯಷ್ಟೇ ಅನ್ಲಾಕ್ ಆಗಿದೆ. ಹೀಗಾಗಿ ವಿಕೇಂಡ್ ದಿನದಂದು ಸಾವಿರಾರು ಮಂದಿ ನಂದಿಗಿರಿಧಾಮಕ್ಕೆ ಆಗಮಿಸಿ ಬೆಟ್ಟದ ಅನನ್ಯ ಪ್ರಾಕೃತಿಕ ಸೌಂದರ್ಯದ ಸೊಬಗನ್ನ ಸವಿಯುತ್ತಿದ್ದಾರೆ.