– ನೀರು ಕುಡಿಯಲು ದೇವಸ್ಥಾನಕ್ಕೆ ಬಂದಿದ್ದ ಬಾಲಕ
ನವದೆಹಲಿ: ದೇವಸ್ಥಾನಕ್ಕೆ ನೀರು ಕುಡಿಯಲು ಬಂದ ಮುಸ್ಲಿಂ ಬಾಲಕನ ಮೇಲೆ ಹಲ್ಲೆ ಮಾಡಿದ್ದವನನ್ನು ಘಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ನಂದನ್ ಯಾದವ್ ಆಗಿದ್ದಾನೆ. ನಂದನ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಮೂಲತಃ ಬಿಹಾರದ ಭಾಗಲ್ಪುರ್ದವನಾಗಿದ್ದಾನೆ. ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಘಾಜಿಯಾಬಾದ್ ಎಸ್ಪಿ ಕಲಾನಿಧಿ ನೈಥಾನಿ ಹೇಳಿದ್ದಾರೆ.
Advertisement
उपरोक्त वीडियो का तत्काल संज्ञान लेकर टीम गठित कर मार पिटाई करने वाले व्यक्ति- श्रृंगी नंदन यादव पुत्र अश्वनी कुमार यादव निवासी गोपालपुर थाना संवारा भागलपुर बिहार को हिरासत में लिया गया एवं मुकदमा पंजीकरण/वैधानिक कार्रवाई संबंधी प्रक्रिया प्रचलित की गई pic.twitter.com/MVEXfqwnJ6
— GHAZIABAD POLICE (@ghaziabadpolice) March 12, 2021
Advertisement
14 ವರ್ಷದ ಮುಸ್ಲಿಂ ಹುಡುಗನೊಬ್ಬ ಬಾಯಾರಿಕೆಯೆಂದು ನೀರು ಕುಡಿಯಲು ದೇವಸ್ಥಾನದ ಒಳಗೆ ಬಂದಿದ್ದ. ನೀನು ಯಾರು? ನಿನ್ನ ಹೆಸರೇನು? ದೇವಸ್ಥಾನದ ಒಳಗೆ ಯಾಕೆ ಬಂದೆ ಎಂದು ಕೇಳಿದ್ದಾನೆ. ಹುಡುಗನ ಬಲಗೈ ತಿರುಚಿ ಹಲ್ಲೆ ಮಾಡಿದ್ದಾನೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ತಕ್ಷಣ ಎಚ್ಚರಿತುಕೊಂಡ ಪೊಲೀಸ್ ಹಲ್ಲೆ ಮಾಡಿದ ಯುವಕನನ್ನು ಬಂಧಿಸಿದ್ದಾರೆ.
Advertisement
This kids fault was that despite being his name is Asif and he was drinking water at a Temple.#IslamphobiaInIndia pic.twitter.com/M2Ly31E5UZ
— Muhammad (@MohdBM793) March 12, 2021
Advertisement
ನಂದನ್ ಯಾದವ್ ಹಲವು ತಿಂಗಳುಗಳಿಂದ ದೇವಸ್ಥಾನದಲ್ಲಿಯೇ ಉಳಿದುಕೊಂಡಿದ್ದ. ಈತ ನೀರಿದ್ಯೋಗಿ ಎಂದು ಸ್ಥಳೀಯರು ಹೇಳಿದ್ದಾರೆ.