– ಜನರು, ಆರೋಗ್ಯಾಧಿಕಾರಿಗಳಿಗೆ ಡೇಂಜರ್ ಅಲಾರಂ
ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಆರೋಗ್ಯಾಧಿಕಾರಿಗಳಿಗೆ ಮತ್ತು ಜನರಿಗೆ ಡೇಂಜರ್ ಅಲಾರಂ ಬಂದಿದೆ.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂತು ಎಂಬ ಹೊತ್ತಲ್ಲೇ ಆಘಾತಕಾರಿ ಬೆಳವಣಿಗೆಯೊಂದು ಕಾಣಿತ್ತಿದೆ. ಬೆಂಗಳೂರಿನಲ್ಲಿ 8-10 ಬರುತ್ತಿದ್ದ ಪ್ರಕರಣಗಳು ಈಗ ದಿನಕ್ಕೆ 25-30 ಪ್ರಕರಣಗಳು ಬರಲು ಆರಂಭವಾಗುತ್ತಿವೆ. ಅದರಲ್ಲೂ ಹೊಸ ಏರಿಯಾಗಳಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದೆ. ಈ ಮೂಲಕ ಕೊರೊನಾ ಪ್ರಕರಣಗಳು ಡೇಂಜರ್ ಅಲಾರಂ ಆಗಿವೆ.
Advertisement
Advertisement
ಈ ಬೆಳವಣಿಗೆಯಿಂದ ಬೆಂಗಳೂರಿಗೆ ಕಂಟಕ ಕಾದಿದ್ಯಾ, ಈ ಪ್ರಕರಣಗಳು ಎಚ್ಚರಿಕೆವಹಿಸುವಂತೆ ಮುನ್ಸೂಚನೆ ಕೊಡ್ತಾ ಇದೆಯಾ ಎಂಬ ಆತಂಕ ಶುರುವಾಗಿದೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಕರಣಗಳಲ್ಲಿ ದ್ವಿಗುಣವಾಗಿದೆ. ಇದು ಬೆಂಗಳೂರಿಗೆ ಆತಂಕಕಾರಿ ಬೆಳವಣಿಗೆನಾ ಎಂಬ ಭಯ ಶುರುವಾಗಿದೆ..
Advertisement
ಇಡೀ ದೇಶವೇ ಅನ್ಲಾಕ್ ಆಗುತ್ತಿರುವ ಬೆನ್ನಲ್ಲೇ ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೇ ತಿಂಗಳಲ್ಲಿ ಡಬಲ್ ಆಗಿದೆ. ಆಘಾತಕಾರಿ ಅಂಶವೆಂದರೆ ಮೇ ಕೊನೆ ವಾರದಲ್ಲೇ ಬೆಂಗಳೂರಲ್ಲಿ 100 ಗಡಿ ಹತ್ತಿರಕ್ಕೆ ಬಂದಿದೆ. ಲಾಕ್ಡೌನ್ ರಿಲೀಫ್ ಸಿಗುತ್ತಿರುವಂತೆ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ.
Advertisement
ಹೆಚ್ಚಳ ಹೇಗೆ?
ಏಪ್ರಿಲ್ 30ರ ವರೆಗೂ ಬೆಂಗಳೂರಿನಲ್ಲಿ 182 ಮಂದಿಯಲ್ಲಿ ಕೊರೊನಾ ಕಂಡು ಬಂದಿತ್ತು. ಆದರೆ ಮೇ 31ರ ವರೆಗೆ ಬರೋಬ್ಬರಿ 361 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಂದೇ ತಿಂಗಳಲ್ಲಿ ಕೊರೊನಾ ಪ್ರಕರಣ ದ್ವಿಗುಣವಾಗಿದೆ. ಒಂದೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ 185ಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಮೇ ಕೊನೆ ವಾರದಲ್ಲಿ 102 ಕೊರೊನಾ ಪಾಸಿಟಿವ್ ಬಂದಿದೆ. ಅಂದರೆ ಮೇ 24ರಿಂದ ಮೇ 31ರ ನಡುವೆ 102 ಮಂದಿಗೆ ಕೊರೊನಾ ಬಂದಿದೆ.
ಈ ರೀತಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣ ಆಗುತ್ತಾ ಹೋಗುತ್ತಿದ್ದು, ಮತ್ತೊಂದು ಆತಂಕಕಾರಿ ವಿಚಾರ ಅಂದರೆ ಬೆಂಗಳೂರಿನ ಹೊಸ ಏರಿಯಾಗಳಲ್ಲಿ ಸೊಂಕು ಪತ್ತೆಯಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿ ಇಲ್ಲದಿದ್ದರೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಇಡೀ ಬೆಂಗಳೂರಿಗೆ ಸಮುದಾಯಕ್ಕೆ ಹಬ್ಬಿದ್ಯಾ ಎಂಬ ಆತಂಕ ಶುರುವಾಗಿದೆ.
ಹೊಸ ಏರಿಯಾಗಳಲ್ಲಿ ಸೋಂಕು:
ಕೆಜಿಹಳ್ಳಿ – ಓರ್ವ ಕೊರೊನಾಗೆ ಬಲಿ, ಡಿಜೆ ಹಳ್ಳಿ – 15, ಮಹಾಲಕ್ಷ್ಮೀ ಲೇ ಔಟ್ – 1, ಯಲಹಂಕ ನ್ಯೂ ಟೌನ್ – 1, ಲಕ್ಕಸಂದ್ರ – 2, ನಾಗರಭಾವಿ – 2, ಪದ್ಮನಾಭ ನಗರ – 1, ಯಶವಂತಪುರ – 4, ಗುರಪ್ಪನ ಪಾಳ್ಯ – 1, ಹೊಂಬೇಗೌಡ ನಗರ – 1, ದೀಪಾಂಜಲಿ ನಗರ – 4, ಶ್ರೀ ರಾಂಪುರ – 1, ವಿಜಯ ನಗರ – 1, ಆಸ್ಟಿನ್ ಟೌನ್ – 3, ಈ ರೀತಿ 14ಕ್ಕೂ ಹೆಚ್ಚು ಹೊಸ ಏರಿಯಾಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಇನ್ನಿತರ ಹೊಸ ಏರಿಯಾಗಳಿಗೂ ಸೋಂಕು ಹಬ್ಬುವ ಭೀತಿ ಎದುರಾಗಿದೆ.
ಲಾಕ್ಡೌನ್ ಸಡಿಲಿಕೆ ನಡುವೆ ಬೆಂಗಳೂರಿನಲ್ಲಿ ಜನರ ಓಡಾಟ ಜಾಸ್ತಿಯಾಗಿದ್ದು ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ದಿನಕ್ಕೆ 30 ಪ್ರಕರಣಗಳು ಬರುತ್ತಿವೆ. ಜನರು ಮತ್ತಷ್ಟು ಎಚ್ಚರದಿಂದ ಇರಬೇಕಾಗಿದೆ.