ತಡರಾತ್ರಿ ರೌಡಿಶೀಟರ್‌ನ ಬರ್ಬರ ಕೊಲೆ

ವಿಜಯಪುರ: ತಡರಾತ್ರಿ ದುಷ್ಕರ್ಮಿಗಳು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ರಿಂಗ್ ರೋಡ್ ಬಳಿ ಈ ಘಟನೆ ನಡೆದಿದೆ. ವಿಜಯಪುರ ನಿವಾಸಿ ಸತೀಶ್ ರೆಡ್ಡಿ (28) ಕೊಲೆಯಾದ ರೌಡಿಶೀಟರ್.

- Advertisement -

ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಸತೀಶ್ ರೆಡ್ಡಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

- Advertisement -

ಹಳೆಯ ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -