ಅಬುಧಾಬಿ: ಡೆಲ್ಲಿ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಸೋತರೂ ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಕೋಲ್ಕತ್ತಾಕ್ಕಿಂತ ಉತ್ತಮ ರನ್ ರೇಟ್ ಹೊಂದಿದ್ದ ಕಾರಣ ಆರ್ಸಿಬಿಯ ಪ್ಲೇ ಆಫ್ ಕನಸು ನನಸಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು. ಡೆಲ್ಲಿ 6 ವಿಕೆಟ್ಗಳ ಜಯವನ್ನು ಸಾಧಿಸಿ 16 ಅಂಕ ಪಡೆಯುವ ಮೂಲಕ ಎರಡನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.
Advertisement
Advertisement
ಡೆಲ್ಲಿ ಪರ ಶಿಖರ್ ಧವನ್ 54 ರನ್(41 ಎಸೆತ,6 ಬೌಂಡರಿ), ಅಜಿಂಕ್ಯಾ ರಹಾನೆ 60 ರನ್(46 ಎಸೆತ, 5 ಬೌಂಡರಿ,1 ಸಿಕ್ಸ್) ಹೊಡೆದು ಔಟಾದರು.
Advertisement
ಕೋಲ್ಕತ್ತಾದ ಪ್ಲೇ ಆಫ್ ಭವಿಷ್ಯ ನಾಳೆ ನಡೆಯಲಿರುವ ಪಂದ್ಯದ ಮೇಲೆ ನಿಂತಿದೆ. ಮುಂಬೈ ವಿರುದ್ಧ ಹೈದರಾಬಾದ್ ಸೋತರೆ ಕೋಲ್ಕತ್ತಾ 14 ಅಂಕದ ಆಧಾರದ ಮೇಲೆ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಲಿದೆ.
Advertisement
ಇಂದಿನ ಪಂದ್ಯದಲ್ಲಿ ಒಂದು ವೇಳೆ 17.3 ಓವರ್ ಅಥವಾ ಅದಕ್ಕಿಂತ ಕಡಿಮೆ ಓವರಿನಲ್ಲಿ ಡೆಲ್ಲಿ ಗೆದ್ದಿದ್ದರೆ ಆರ್ಸಿಬಿ ನೆಟ್ ರನ್ ರೇಟ್ ಕೋಲ್ಕತ್ತಾಕ್ಕಿಂತ ಕಡಿಮೆ ಇರುತ್ತಿತ್ತು. ಒಂದು ವೇಳೆ ಆರ್ಸಿಬಿ 19 ರನ್ ಅಂತರದಿಂದ ಗೆದ್ದಿದ್ದರೆ ಡೆಲ್ಲಿ ನೆಟ್ ರನ್ ರೇಟ್ ಕೋಲ್ಕತ್ತಾಕ್ಕಿಂತ ಕಡಿಮೆ ಆಗುತ್ತಿತ್ತು.
ಇಂದಿನ ಪಂದ್ಯಕ್ಕೂ ಮೊದಲು ಆರ್ಸಿಬಿ ನೆಟ್ ರನ್ ರೇಟ್ -0.145 ಇದ್ದರೆ ಡೆಲ್ಲಿ -0.159 ಇತ್ತು. ಆದರೆ ಈಗ ಆರ್ಸಿಬಿ ನೆಟ್ ರನ್ ರೇಟ್ -0.172ಗೆ ಜಾರಿದರೆ ಕೋಲ್ಕತ್ತಾ -0.214 ನೆಟ್ ರನ್ ರೇಟ್ ಹೊಂದಿದೆ.
ಆರ್ಸಿಬಿ ಪರ ಪಡಿಕ್ಕಲ್ 50 ರನ್(41 ಎಸೆತ, 5 ಬೌಂಡರಿ), ಕೊಹ್ಲಿ 29 ರನ್(24 ಎಸೆತ, 2 ಬೌಂಡರಿ,1 ಸಿಕ್ಸರ್) ಎಬಿ ಡಿವಿಲಿರ್ಸ್ 35 ರನ್(21 ಎಸೆತ, 1 ಬೌಂಡರಿ, 2 ಸಿಕ್ಸರ್) ಶಿವಂ ದುಬೆ 17 ರನ್(11 ಎಸೆತ, 2 ಬೌಂಡರಿ,1 ಸಿಕ್ಸರ್) ಹೊಡೆದರು.