– ಸವಾರ ದುರ್ಮರಣ
ಹುಬ್ಬಳ್ಳಿ: ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಟೆಂಪೋವೊಂದು ಸುಮಾರು 20 ಮೀಟರ್ ಬೈಕ್ ಸಮೇತ ಎಳೆದೊಯ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಅಂಚಟಗೇರಿಗೆ ಹೋಗುತ್ತಿದ್ದ ಟೆಂಪೋ ಹಾಗೂ ಕಲಘಟಗಿ ಕಡೆಯಿಂದ ಬರುತ್ತಿದ್ದ ಬೈಕ್, ಕಾರವಾರ ರಸ್ತೆಯ ಕೆಂಪಗೇರಿಯ ಗಣೇಶ್ ಗುಡಿ ಹತ್ತಿರ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಹುಬ್ಬಳ್ಳಿ ಅಲ್ತಾಫನಗರದ ನಿವಾಸಿ ಮೆಹಬೂಬಸಾಬ ತಾರೆಗಾರ್(23) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement
Advertisement
ಟೆಂಪೋ ಚಾಲಕ ವೇಗವಾಗಿ ಬರುತ್ತಿದ್ದ ಸಮಯದಲ್ಲಿ ಮುಂದೆ ಬಂದ ಬೈಕಿಗೆ ಡಿಕ್ಕಿ ಹೊಡೆದು, ಅದೇ ವೇಗದಲ್ಲಿ 20 ಮೀಟರ್ ಟೆಂಪೋ ಚಲಿಸಿದೆ. ರಸ್ತೆಯಲ್ಲಿಯೇ ತೀವ್ರವಾಗಿ ಗಾಯಗೊಂಡಿದ್ದ ಯುವಕ, ಕಿಮ್ಸ್ ಗೆ ರವಾನೆಯಾಗುವ ಮುನ್ನವೇ ಸಾವಿಗೀಡಾಗಿದ್ದಾನೆ.
Advertisement
ಅಂಚಟಗೇರಿ ಸಮೀಪ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ರಸ್ತೆ ಧೂಳಿನಿಂದ ತುಂಬಿದ್ದು, ಎದುರಿಗೆ ಬರುವ ವಾಹನಗಳು ಸಡನ್ನಾಗಿ ಕಾಣುವುದೇ ಇಲ್ಲ. ಹೀಗಾಗಿಯೇ ಘಟನೆ ನಡೆದಿದ್ದು, ಅಪಘಾತ ನಡೆಯುತ್ತಿದ್ದ ಹಾಗೇ ಟೆಂಪೋ ಚಾಲಕ ವಾಹನವನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.