Connect with us

Cinema

ಟ್ರಸ್ಟ್ ಹೆಸರಲ್ಲಿ ಭಾರೀ ಮೋಸ- ಎಚ್ಚರಿಕೆ ನೀಡಿದ ದಬಾಂಗ್ ಸ್ಟಾರ್

Published

on

ನವದೆಹಲಿ: ಸ್ಟಾರ್ ನಟರ ಹೆಸರಲ್ಲಿ ಮೋಸ ನಡೆಯುತ್ತಿರುವ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಕೆಲ ಜನ ಯಾಮಾರಿಸುತ್ತಿದ್ದರು. ಇದೀಗ ಬಡವರಿಗೆ ಹಾಗೂ ಯುವ ಕಲಾವಿದರಿಗೆ ಮೋಸ ಮಾಡಲು ಮುಂದಾಗಿದ್ದಾರೆ. ಅದೂ ಸಹ ಟ್ರಸ್ಟ್ ಗಳ ಹೆಸರಿನಲ್ಲಿ ಯಾಮಾರಿಸುತ್ತಿದ್ದು, ಭಾಯಿಜಾನ್ ಸಲ್ಮಾನ್ ಖಾನ್ ಅವರ ಸಲ್ಮಾನ್ ಖಾನ್ ಫಿಲಮ್ಸ್ ಹೆಸರಿನಲ್ಲಿ ಯುವ ಕಲಾವಿದರಿಗೆ ಮೋಸ ಮಾಡುತ್ತಿದ್ದಾರೆ.

ಹೌದು ನಕಲಿ ಖಾತೆಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿದ್ದ ಕಿಡಿಗೇಡಿಗಳು ಇದೀಗ ಬಡ ಕಲಾವಿದರ ನಟನೆಯ ಬಯಕೆಯನ್ನೇ ಬಂಡವಾಳವನ್ನಾಗಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಬಡ ಪ್ರತಿಭಾವಂತರಿಗೆ ಚಿತ್ರರಂಗದಲ್ಲಿ ಅವಕಾಶ ಕೊಡುವ ಉದ್ದೇಶದಿಂದ ಸಲ್ಮಾನ್ ಖಾನ್ ಫಿಲಮ್ಸ್ ಎಂಬ ಸಂಸ್ಥೆಯನ್ನು ಭಾಯಿಜಾನ್ ಹುಟ್ಟುಹಾಕಿದ್ದಾರೆ. ಈ ಮೂಲಕ ಹಲವು ಬಡ ಪ್ರತಿಭಾವಂತರಿಗೆ ಸಹಾಯ ಮಾಡುತ್ತಿದ್ದಾರೆ. ಕಿಡಿಗೇಡಿಗಳು ಇದರ ಮೇಲೂ ಕಣ್ಣು ಹಾಕಿದ್ದು, ಸಲ್ಮಾನ್ ಖಾನ್ ಹೆಸರು ಬಳಸಿಕೊಂಡು ಅಮಾಯಕರಿಗೆ ಮೋಸ ಮಾಡುವ ಗ್ಯಾಂಗ್ ಹುಟ್ಟಿಕೊಂಡಿದೆ.

ಜನ ಕೆಲಸ ಇಲ್ಲದೆ ಖಾಲಿ ಕುಳಿತಿದ್ದಾರೆ. ಲಾಕ್‍ಡೌನ್ ಪರಿಣಾಮವಾಗಿ ಎಲ್ಲರಿಗೂ ಅಭದ್ರತೆ ಕಾಡುತ್ತಿದೆ. ಇದೇ ಸಮಯವನ್ನು ಬಳಸಿಕೊಂಡು ಕಿಡಿಗೇಡಿಗಳು ಮೋಸ ಮಾಡುವ ದಂಧೆಗೆ ಇಳಿದಿದ್ದಾರೆ. ಇದನ್ನು ಸಲ್ಲು ಭಾಯ್ ಗಮನಿಸಿದ್ದು, ಗರಂ ಆಗಿದ್ದಾರೆ. ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವದಂತಿಗಳನ್ನು ನಂಬಬೇಡಿ ಎಂದು ಬರೆದಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಫಿಲಮ್ಸ್ ಸದ್ಯ ಯಾವುದೇ ಸಿನಿಮಾಗೆ ಕಾಸ್ಟಿಂಗ್ ನಡೆಸುತ್ತಿಲ್ಲ. ನಮ್ಮ ಮುಂದಿನ ಸಿನಿಮಾ ಕುರಿತು ಯಾವುದೇ ಏಜೆಂಟ್‍ಗಳಿಗೆ ಕರೆ ನೀಡಿಲ್ಲ. ಈ ವಿಷಯವಾಗಿ ಯಾರು, ಯಾವುದೇ ರೀತಿಯ ಸಂದೇಶ ಅಥವಾ ಇ-ಮೇಲ್ ಕಳುಹಿಸಿದರೆ ನಂಬಬೇಡಿ ಎಂದು ಟ್ವೀಟ್‍ನಲ್ಲಿ ಶೇರ್ ಮಾಡಿದ ಫೋಟೋದಲ್ಲಿ ವಿವರಿಸಿದ್ದಾರೆ.

ಸಲ್ಮಾನ್ ಖಾನ್ ಫಿಲಮ್ಸ್ ಹಾಗೂ ನನ್ನ ಹೆಸರಿನಲ್ಲಿ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಲ್ಮಾನ್ ಖಾನ್ ಎಚ್ಚರಿಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಫಾರ್ಮ್ ಹೌಸ್‍ನಲ್ಲೇ ಕಾಲ ಕಳೆಯುತ್ತಿರುವ ಸಲ್ಮಾನ್ ಖಾನ್, ಕ್ರಿಯೇಟಿವ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಜಾಕ್ವಲಿನ್ ಫರ್ನಾಂಡಿಸ್ ಜೊತೆ ಸೇರಿ ತೆರೆ ಬಿನ್ ವಿಡಿಯೋ ಸಾಂಗ್ ಮೂಲಕ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಇಷ್ಟೇ ಅಲ್ಲದೆ ಫಿಟ್ನೆಸ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *