ಚಾಮರಾಜನಗರ: ಟಿಬೇಟಿಯನ್ ಕಾಲೋನಿಯಲ್ಲಿ ಕೊರೊನಾ ಸ್ಪೋಟವಾಗಿದ್ದು, ಇದರಿಂದ ಜಿಲ್ಲೆಗೆ ಮೂರನೇ ಅಲೆ ಎಂಟ್ರಿ ಕೊಟ್ಟಿತಾ ಎಂಬ ಆತಂಕ ಎದುರಾಗಿದೆ.
Advertisement
ಕಳೆದೊಂದು ವಾರದಲ್ಲಿ ಟಿಬೇಟಿಯನ್ ಕಾಲೋನಿಯ 39 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯ ಹನೂರು ತಾಲೂಕಿನ ಒಡೆಯರ್ ಪಾಳ್ಯ ಸಮೀಪದ ಟಿಬೇಟಿಯನ್ ಕಾಲೋನಿ ನಿವಾಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಟಿಬೆಟಿಯನ್ಸ್ ವಾಸಿಸುತ್ತಿರುವ ಕಾಲೋನಿ ಇದಾಗಿದ್ದು, ಶೇ.100 ರಷ್ಟು ಜನ ವ್ಯಾಕ್ಸಿನ್ ಪಡೆದಿದ್ದರು. ವ್ಯಾಕ್ಸಿನ್ ಪಡೆದರೂ ಇದೀಗ ಸೋಂಕು ಕಾಣಿಸಿಕೊಂಡಿದೆ.
Advertisement
Advertisement
ಟಿಬೇಟಿಯನ್ ಕಾಲೋನಿ ಸೀಲ್ ಡೌನ್ ಮಾಡಲು ಅಧಿಕಾರಿಗಳು ಚಿಂತಿಸಿದ್ದಾರೆ. 3,500 ಜನಸಂಖ್ಯೆ ಹೊಂದಿರುವ ಟಿಬೇಟಿಯನ್ ಕಾಲೋನಿಗೆ ಇದೀಗ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಟಿಬೇಟಿಯನ್ ಸೆಟಲ್ಮೆಂಟ್ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ಎರಡನೇ ಅಲೆ ವೇಳೆ ಜಿಲ್ಲೆಯಲ್ಲಿ ಮೊದಲು ಸೋಂಕು ಮುಕ್ತವಾಗಿದ್ದು ಟಿಬೇಟಿಯನ್ ಕಾಲೋನಿ. ಟಿಬೇಟಿಯನ್ಸ್ ಸಾಮಾಜಿಕ ಅಂತರ, ಮಾಸ್ಕ್, ವ್ಯಾಕ್ಸಿನೇಷನ್ ಕಡ್ಡಾಯವಾಗಿ ಪಾಲನೆ ಮಾಡಿಡುತ್ತಿದ್ದರು. ಸೋಂಕು ಹೇಗೆ ಬಂತು ಎಂದು ಅಧಿಕಾರಿಗಳು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸೋಂಕು ಹೆಚ್ಚಳದಿಂದ ಅಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗಿದೆ.