Connect with us

Cricket

ಟ್ವಿಸ್ಟ್ ಕೊಟ್ಟು ಹಾರ್ದಿಕ್ ಪಾಂಡ್ಯ ಚಾಲೆಂಜ್ ಪೂರ್ಣಗೊಳಿಸಿದ ಕೊಹ್ಲಿ

Published

on

ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ನೀಡಿದ್ದ ಫಿಟ್ನೆಸ್ ಚಾಲೆಂಜನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಸ್ವೀಕರಿಸಿದ್ದು, ಚಾಲೆಂಜ್‍ಗೆ ಹೊಸ ಟ್ವಿಸ್ಟ್ ನೀಡಿ ಪೂರ್ಣಗೊಳಿಸಿದ್ದಾರೆ. ಈ ಕುರಿತು ವಿಡಿಯೋವನ್ನು ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ನಿನ್ನ ಫ್ಲೈ ಪುಶ್ ಅಪ್ ಚಾಲೆಂಜ್ ನನಗೆ ತುಂಬಾ ಇಷ್ಟ ಆಯ್ತು. ಇದಕ್ಕೆ ಚಪ್ಪಾಳೆ ಸೇರಿಸಿದ್ದೇನೆ ಎಂದು ಕೊಹ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಫ್ಲೈ ಪುಶ್ ಅಪ್‍ನೊಂದಿಗೆ ಚಪ್ಪಾಳೆ ಬಡಿದು ಚಾಲೆಂಗ್ ಪೂರ್ಣಗೊಳಿಸಿರುವುದು ಕಾಣಬಹುದಾಗಿದೆ.

 

View this post on Instagram

 

Hey H @hardikpandya93 loved your fly push ups ????????. Here’s adding a little clap to it ????.

A post shared by Virat Kohli (@virat.kohli) on

ಈ ಮೊದಲು ಫ್ಲೈ ಪುಶ್ ಅಪ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ, ಸಹೋದರ ಕೃನಾಲ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಅವರಿಗೆ ಚಾಲೆಂಜ್ ನೀಡಿದ್ದರು. ‘ಸ್ಟ್ರಾಂಗರ್, ಫಿಟ್ಟರ್. ಇನ್ನು ನಿರ್ಮಾಣದ ಹಂತದಲ್ಲಿದೆ ಬಾಯ್, ಇದಕ್ಕಿಂತ ಉತ್ತಮವಾಗಿ ವರ್ಕೌಟ್ ಮಾಡಬೇಕು ಎಂದು ಸವಾಲು ಮಾಡಿದ್ದರು. ಲಾಕ್‍ಡೌನ್ ಕಾರಣದಿಂದ ಕ್ರಿಕೆಟ್‍ನಿಂದ ದೂರ ಉಳಿದಿರುವ ಆಟಗಾರರು ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟ್ ಆಟಗಾರರಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿ ತುಂಬಿ, ಫಿಟ್ನೆಸ್ ಕಾಯ್ದುಕೊಳ್ಳುವಂತೆ ಮಾಡಿದ್ದರು. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮನೀಶ್ ಪಾಂಡೆ, ಶಮಿ ಸೇರಿದಂತೆ ಹಲವು ಆಟಗಾರರು ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಸದ್ಯ ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದಿರುವ ಆಟಗಾರರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಮನೆಯಲ್ಲೇ ವರ್ಕೌಟ್ ಮಾಡಿ ಆ ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *