– ಪ್ರಾಣಿಗಳಿಗೆ ನಮ್ಮನ್ನು ನೋಡುವ ಆಸೆ ಇಲ್ಲ
– ಪ್ರಾಣಿಗಳ ಬದುಕನ್ನು ಚಿಂತಾಜನಕ ಮಾಡಿದ್ದೇವೆ
– ನಿಮ್ಮ ಸ್ವಾತಂತ್ರ್ಯವು ಬೇರೆ ಜೀವಿಗಳನ್ನು ಹಾಳು ಮಾಡುತ್ತೆ
ಬೆಂಗಳೂರು: ದಯವಿಟ್ಟು ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ನಿಲ್ಲಿಸಿ ಪ್ರಾಣಿಗಳಿಗೆ ನಮ್ಮನ್ನು ನೋಡುವ ಆಸೆ ಇಲ್ಲ ಎಂದು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಕುರಿತಾದ ಕಾಳಜಿಯುತ ಪೋಸ್ಟ್ ಹಾಕಿದ್ದಾರೆ.
ಈಗಾಗಲೇ ಪ್ರಾಣಿಗಳ ಬದುಕನ್ನು ಚಿಂತಾಜನಕವಾಗಿ ಮಾಡಿದ್ದೇವೆ. ಪ್ರಾಣಿಗಳು ನಮ್ಮನ್ನು ನೋಡಲು ಇಷ್ಟಪಡೋದಿಲ್ಲ. ನೀವು ಎಷ್ಟು ಹೋಗುತ್ತೀರೋ ಅಷ್ಟು ಕಾಡಿನಲ್ಲಿ ರೆಸಾಟ್ರ್ಸ್ಗಳು ಆಗುತ್ತವೆ. ದುರಾಸೆ, ಸ್ವಾರ್ಥದಿಂದ ಕೂಡಿರಬೇಡಿ. ಪ್ರಾಣಿಗಳಿಗೂ ಪ್ರೀತಿ, ಗೌರವ ಪಡೆಯುವ, ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವ ಅರ್ಹತೆಯಿದೆ. ನೀವು ಪ್ರಾಣಿಗಳನ್ನು ಇಷ್ಟಪಟ್ಟರೆ ಅವುಗಳನ್ನು ಪಾಡಿಗೆ ಬಿಡಿ. ಮೃಗಾಲಯ ಹೋಗಬೇಕು ಅಂತೇನಿಲ್ಲ. ಅವುಗಳ ಫೋಟೋ ತೆಗೆಯಬೇಕು ಅಂತೇನಿಲ್ಲ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಬೇಕು ಅಂತೇನಿಲ್ಲ. ನೀವು ನಿಮಗಾಗಿ ಇದನ್ನೆಲ್ಲ ಮಾಡುತ್ತೀರಿ ಎಂದು ರಮ್ಯಾ ಇನ್ಸ್ಟಾದಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ.
Advertisement
Advertisement
ಯಾಕೆ ನಾವು ಇಷ್ಟೊಂದು ಕ್ರೂರಿಗಳಾಗುತ್ತಿದ್ದೇವೆ? ಯಾಕೆ ನಾವು ಕರುಣೆಯಿಂದ ಇರೋದಿಲ್ಲ? ಎಲ್ಲ ಜೀವಿಗಳು ಭೂಮಿಯನ್ನು ಆಧರಿಸಿವೆ? ಎಲ್ಲರೂ ಶಾಂತಿಯುತವಾಗಿ ಬದುಕಬೇಕು ಎಂದು ನಾವು ಯಾವಾಗ ಕಲಿಯುತ್ತೇವೆ? ಮಾನವರು ಜಗತ್ತಿನಲ್ಲಿ ಬದುಕಲು ಕೆಟ್ಟ ಜೀವಿಗಳು. ನನ್ನ ಹೃದಯ ಅಳುತ್ತಿದೆ. ಎಲ್ಲವೂ ಸರಿ ಇದೆ ಅಂತ ನಾವು ಸುಮ್ಮನಿರಲಾಗೋದಿಲ್ಲ. ನಾವು ಮಾತನಾಡದಿದ್ದರೆ, ಕ್ರಮ ಕೈಗೊಳ್ಳದಿದ್ದರೆ ಜಗತ್ತು ಹಾಳಾಗುವುದು. ದಯವಿಟ್ಟು ಝೂಗಳಿಗೆ, ಸಫಾರಿಗಳಿಗೆ ಹೋಗೋದನ್ನು ನಿಲ್ಲಿಸಿ. ಈಗಾಗಲೇ ನಾವು ಅವರ ಜಾಗ, ಆಹಾರ, ನೀರನ್ನು ಪಡೆದಿದ್ದೇವೆ” ಎಂದು ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ಏಕಾಗ್ರತೆ ಪಡೆಯಬೇಕು ಅಂತ ಬಯಸಿದರೆ ನಿಮ್ಮನ್ನು ನೀವೆ ಆತ್ಮಾವಲೋಕನ ಮಾಡಿಕೊಳ್ಳಿ. ಪರ್ವತ, ಕಾಡಿನಲ್ಲಿ, ಸಮುದ್ರದಲ್ಲಿ ಏಕಾಗ್ರತೆ ಸಿಗೋದಿಲ್ಲ. ಏಕಾಗ್ರತೆ ನಿಮ್ಮಲ್ಲಿಯೇ ಇದೆ. ಜಗತ್ತನ್ನು ಹಾಳು ಮಾಡುವುದರ ಬದಲು ನಿಮ್ಮನ್ನು ನೀವೇ ಏನು ಅಂತ ಕಂಡುಕೊಳ್ಳಿ, ರಂಜಿಸಿಕೊಳ್ಳಿ. ನಿಮ್ಮ ಸ್ವಾತಂತ್ರ್ಯವು ಬೇರೆ ಜೀವಿಗಳನ್ನು ಹಾಳು ಮಾಡೋದರಿಂದ ಬರೋದಿಲ್ಲ” ಎಂದು ನಟಿ ರಮ್ಯಾ ಖಾರವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಆನೆಯೊಂದರ ಮೇಲೆ ಬೆಂಕಿಹಚ್ಚಿದ ಟೈರ್ ಎಸೆದಿದ್ದರು. ನೋವು ತಾಳಲಾರದೆ ಆನೆ ಪ್ರಾಣ ಬಿಟ್ಟಿತ್ತು. ಈ ಹೃದಯವಿದ್ರಾವಕ ವೀಡಿಯೋವನ್ನು ಹಂಚಿಕೊಂಡು ರಮ್ಯಾ ಅವರು ಪ್ರಾಣಿಗಳ ಕುರಿತಾಗಿ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಹಾಗೂ ರಾಜಕಾರಣದಿಂದ ದೂರವಿರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಆಗಾಗ ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.