Bengaluru CityKarnatakaLatestMain Post

ಇಂದಿನಿಂದ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

– ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಕೊರೊನಾ ಎರಡನೇ ಅಲೆ ಮಧ್ಯೆ ಶಿಕ್ಷಣ ಇಲಾಖೆ 2021ನೇ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಾರಂಭ ಮಾಡಿದೆ. ಇಂದಿನಿಂದ ಜುಲೈ 10ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆಗಸ್ಟ್ 28 ಮತ್ತು 29ರಂದು ಸಿಇಟಿ ಪರೀಕ್ಷೆ ನಡೆಸಲು ಕೆಇಎ ಈಗಾಗಲೇ ವೇಳಾಪಟ್ಟಿ ಪ್ರಕಟ ಮಾಡಿದೆ. ಹೀಗಾಗಿ ಇದೀಗ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಪರೀಕ್ಷೆ ಬರೆಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಎಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ-ಫಾರ್ಮ್, ಕೃಷಿ ವಿಜ್ಞಾನ, ವೆಟರಿನರಿ ಕೋರ್ಸ್ ಸೀಟು ಹಂಚಿಕೆಗೆ ರಾಜ್ಯ ಸರ್ಕಾರ ಸಿಇಟಿ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೇಳಾಪಟ್ಟಿ ಹೀಗಿದೆ.

ಕೆಇಎ ವೇಳಾಪಟ್ಟಿ
– ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ- ಜೂನ್ 15 ರಿಂದ ಜುಲೈ 10ವರೆಗೆ
– ಆನ್‍ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನ- ಜುಲೈ 13
– ವಿಶೇಷ ಪ್ರವರ್ಗಗಳ ದಾಖಲಾತಿ ಸಲ್ಲಿಕೆ- ಜುಲೈ 14 ರಿಂದ ಜುಲೈ 20
– ಆನ್‍ಲೈನ್ ಅರ್ಜಿ ಮಾಹಿತಿ ತಿದ್ದುಪಡಿ- ಜುಲೈ 19 ರಿಂದ ಜುಲೈ 22
– ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳುವುದು- ಆಗಸ್ಟ್ 13ರಿಂದ

Leave a Reply

Your email address will not be published.

Back to top button