Bengaluru CityDistrictsKarnatakaLatestMain Post

ಜಮೀರ್ ಹೆಸರಲ್ಲಿ ಕದ್ದ ಕಾರು ಗಣ್ಯರಿಗೆ ಮಾರಾಟ

– ತನಿಖೆ ವೇಳೆ ರೋಚಕ ಸಂಗತಿ ಬೆಳಕಿಗೆ

ಬೆಂಗಳೂರು: ಸಿಸಿಬಿಯಿಂದ 19 ಐಷಾರಾಮಿ ಕಾರುಗಳ ಸೀಜ್ ಪ್ರಕರಣದಲ್ಲಿ ರೋಚಕ ಸಂಗತಿಗಳು ಹೊರ ಬೀಳುತ್ತಿವೆ. ಆರೋಪಿಗಳು ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹೆಸರಿನಲ್ಲಿ ಪ್ರತಿಷ್ಠಿತರ ಕಾರು ಕದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ನಸೀಬ್, ಮೊಹಮ್ಮದ್ ಆಜಂ, ಮಹೀರ್ ಖಾನ್ ಕೈಗೆ ಕೋಳ ತೊಡಿಸಿದ್ದ ಸಿಸಿಬಿ ಪೊಲೀಸರು ಸೇಲ್ ಮಾಡಿಕೊಂಡ ನೆಪದಲ್ಲಿ ಕದ್ದಿದ್ದ 19 ಐಷಾರಾಮಿ ಕಾರ್ ಗಳನ್ನು  ಸೀಜ್ ಮಾಡಿದ್ದರು.

ಈ ಆರೋಪಿಗಳು ಜಮೀರ್ ಅಹ್ಮದ್ ಅವರ ಪಾಸ್ ಬಳಸಿಕೊಂಡು ತಿರುಗಾಡುತ್ತಿದ್ದರು. ತಮ್ಮ ಫಾರ್ಚೂನರ್ ಕಾರಿಗೆ ಶಾಸಕರ ಪಾಸ್ ಅಂಟಿಸಿಕೊಂಡು ಊರೂರು ಸುತ್ತುತ್ತಿದ್ದರು. ವಂಚನೆ ಎಸಗಲು ಇದೇ ಕಾರು ಬಳಕೆ ಸಹ ಮಾಡಿದ್ದಾರೆ.  ಇದನ್ನೂ ಓದಿ : ಜುಲೈ 26ಕ್ಕೆ ಬಿಎಸ್‍ವೈ ಮಹಾ ಭಾಷಣ? – ಸಿಎಂ ಬೆಂಬಲಿಗರು ಸೈಲೆಂಟ್

ಜಮೀರ್ ಅವರ ಆಪ್ತರು ಎಂದು ಹೇಳಿಕೊಂಡು ಹತ್ತಾರು ಮಂದಿಗೆ ಟೋಪಿ ಹಾಕಿದ್ದಾರೆ. ಬಂಧಿತರಲ್ಲಿ ಆರೋಪಿ ನಸೀಬ್ ನ ಪತ್ನಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಆಗಿದ್ದರೆ, ಮತ್ತೊರ್ವ ಆರೋಪಿ ಆಜಂ, ಸೌದಿಯಿಂದ ಬಂದಿದ್ದ.

ಜಮೀರ್ ಅಪ್ತರೆಂದು ಹೇಳಿ ಕೊಂಡು ಮೂರು ಪ್ರಭಾವಿ ವ್ಯಕ್ತಿಗಳಿಗೆ ಕದ್ದ ಕಾರು ಮಾರಾಟ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿ ಅಸಾದುಲ್ಲಾ ಅವರಿಗೆ ಕದ್ದ ಫಾರ್ಚೂನರ್ ಕಾರು ಮಾರಿದ್ದಾರೆ. ವೇಮಗಲ್ ನಲ್ಲಿ ವಕೀಲರೊಬ್ಬರಿಗೆ ಫೋರ್ಡ್  ಐಕಾನ್ ಕಾರು ಮಾರಾಟ, ಕಾಂಗ್ರೆಸ್ ಪಾಲಿಕೆ ಅಭ್ಯರ್ಥಿ ಲೋಕೇಶ್ ಗೂ ಕದ್ದ ಎಕ್ಸ್ ಯುವಿ ಕಾರು ಮಾರಾಟ ಮಾಡಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಆಪ್ತರೆಂದು ಹೆಳಿಕೊಂಡು ಎಲ್ಲರಿಗೂ ಪಂಗನಾಮ ಹಾಕುತ್ತಿದ್ದ ಖದೀಮರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಮೂವರಿಂದ 19 ಕಾರುಗಳು ವಶ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back to top button