Bengaluru CityCinemaKarnatakaLatestMain PostSandalwood

ಚೀಲಾಧಿಪತಿಯಲ್ಲಿ ಕೊನೆಗೂ ಗೆದ್ದು ಪತ್ರ ಪಡೆದ ಶುಭಾ

– ಶುಭಾ ತಾಯಿ ಪತ್ರಕ್ಕೆ ರಾಜೀವ್ ಫಿದಾ

ಬಿಗ್‍ಬಾಸ್ ಮನೆಗೆ ಕುಟುಂಬಸ್ಥರ ಪತ್ರಗಳು ಮನೆಗೆ ಬಂದಿವೆ. ಇಬ್ಬರು ಜೊತೆಯಾಗಿ ಆಡಿ ಗೆದ್ದವರಿಗೆ ಮಾತ್ರ ಪತ್ರ ಸಿಗುತ್ತೆ. ಈಗಾಗಗಲೇ ರಾಜೀವ್, ದಿವ್ಯಾ ಉರುಡುಗ, ಮಂಜು ಪತ್ರ ಪಡೆದುಕೊಂಡಿದ್ದರು. ಇದೀಗ ನಿನ್ನೆ ಶುಭಾ ಪೂಂಜಾ ಕೊನೆಗೂ ಟಾಸ್ಕ್ ಗೆದ್ದು ಅಮ್ಮನ ಪತ್ರ ಪಡೆದು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ಟಾಸ್ಕ್ ಗೆಲ್ಲುತ್ತಿದ್ದಂತೆ ಭಾವುಕರಾದ ಶುಭಾ ಸಹ ಸ್ಪರ್ಧಿಗಳನ್ನ ಅಪ್ಪಿಕೊಂಡು ಕಣ್ಣೀರು ಹಾಕಿದರು.

ಶುಭಾ ತಾಯಿ ಪತ್ರಕ್ಕೆ ರಾಜೀವ್ ಫಿದಾ: ಈ ಹಿಂದೆ ಪತ್ರ ಪಡೆದವರು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದರು. ಸಣ್ಣ ಸಣ್ಣ ವಿಚಾರಕ್ಕೆ ಮುನಿಸಿಕೊಂಡು ಕಣ್ಣೀರಿಡುವ ಶುಭಾ ಕಣ್ಣೀರು ಹೊಳೆಯೇ ಹರಿಸ್ತಾರೆ ಅಂತ ಮನೆ ಮಂದಿಯೆಲ್ಲ ತಿಳಿದುಕೊಂಡಿದ್ದರು. ಆದ್ರೆ ಶುಭಾ ಅವರ ತಾಯಿ ಬರೆದ ಪತ್ರ ಶೈಲಿ ಕಂಡು ಎಲ್ಲರೂ ಫುಲ್ ಇಂಪ್ರೆಸ್ ಆದ್ರು. ಅದರಲ್ಲಿಯೂ ರಾಜೀವ್ ಮಾತ್ರ ಶುಭಾ ತಾಯಿಯವರ ಬರವಣಿಗೆಗೆ ಫುಲ್ ಫಿದಾ ಆದ್ರು.

ಇದು ನಾನು ನಿನಗೆ ಬರೆಯೋದು ಮೊದಲ ಪತ್ರ. ನೀನು ತುಂಬಾ ದೂರ ಇರೋದರಿಂದ ನಿನ್ನ ಒಳ್ಳೆಯ ಗುಣಗಳು ಕಾಣುತ್ತಿವೆ. ಹತ್ತಿರ ಇರೋವಾಗ ಚೆನ್ನಾಗಿ ಜಗಳ ಮಾಡುತ್ತಿದ್ದೆ. ನಿನ್ನ ಕಾಲೇಜಿನ ದಿನಗಳು, ಡ್ಯಾನ್ಸ್ ಸ್ಪರ್ಧೆಯಲ್ಲಿ ಫಸ್ಟ್ ಬಂದಾಗ ಹೆಮ್ಮೆ, ಹಾಜರಾತಿ ಕಡಿಮೆ ಆದಾಗ ಫೈನ್ ತುಂಬಿ ಹಾಲ್ ಟಿಕೆಟ್ ಪಡೆಯುವಾಗ ಸಿಟ್ಟು. ಈಗ ಎಲ್ಲ ನೆನಪು ಬಂದು ನಗು ಬರುತ್ತೆ. ಪ್ರತಿ ವಾರ ಬುಕ್ ತೆಗೆದುಕೊಳ್ಳುವಾಗ ನಿನ್ನ ಡ್ರಾಮಾ. ಕಾರು ಕೆಟ್ಟಾಗ ಮಾಯವಾಗಿ, ರಿಪೇರಿ ಆಗ್ತಿದ್ದಂತೆ ಪ್ರತ್ಯಕ್ಷ ಆಗ್ತಿದ್ದೆ. ನಿನ್ನಿಂದಾಗಿ ಹೊಸ ಕಾರ್ ಬಂತು. ನೀನು ಸಾಕಿದ ಪ್ರಾಣಿಗಳೆಲ್ಲ ಚೆನ್ನಾಗಿವೆ. ನಿನಗೆ ಶುಭವಾಗಲಿ ನಿನ್ನ ಅಮ್ಮ ಅಂತ ಬರೆದಿದ್ದರು.

ಪತ್ರ ಓದಿದ ಬಳಿಕ ಕ್ಯಾಮೆರಾ ಮುಂದೆ ಬಂದ ಶುಭಾ, ಅಮ್ಮ ನಿನ್ನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪ್ರಾಣಿ-ಪಕ್ಷಿಗಳನ್ನು ಮಿಸ್ ಮಾಡ್ಕೊತ್ತೀನಿ. ಚಿನ್ನಿ ನಿನ್ನ ನೆನಪು ಸಹ ಬರುತ್ತೆ. ಐ ಲವ್ ಯು ಅಮ್ಮ ಎಂದು ಹೇಳಿದರು.

 

Leave a Reply

Your email address will not be published.

Back to top button