ವಾಷಿಂಗ್ಟನ್: ಚೀನಾ ಆಪ್ತ ಮಿತ್ರ ಪಾಕಿಸ್ತಾನಕ್ಕೆ ಅಮೆರಿಕ ಶಾಕ್ ನೀಡಿದೆ. ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್(ಪಿಐಎ) ವಿಮಾನಗಳ ಹಾರಾಟವನ್ನು ಅಮೆರಿಕ ನಿಷೇಧ ಮಾಡಿದೆ.
ಪೈಲಟ್ಗಳ ವಿಮಾನ ಚಲನಾ ಪ್ರಮಾಣಪತ್ರಗಳು ನಕಲಿ ಎಂಬ ಸುದ್ದಿಯ ಬೆನ್ನಲ್ಲೇ ಅಮೆರಿಕ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
Advertisement
Advertisement
ಈ ಮೊದಲು ಯುರೋಪಿಯನ್ ಒಕ್ಕೂಟಗಳು ಪಿಐಎಯನ್ನು 6 ತಿಂಗಳ ಕಾಲ ನಿಷೇಧಿಸಿತ್ತು. ಪಿಐಎಯಲ್ಲಿ ಕರ್ತವ್ಯ ಮಾಡುತ್ತಿರುವ ಪೈಲಟ್ಗಳಿಗೆ ಅರ್ಹತೆಯೇ ಇಲ್ಲ. ನಕಲಿ ಪ್ರಮಾಣ ಪತ್ರ ಪಡೆದು ಉದ್ಯೋಗ ಸೇರಿದ್ದಾರೆ ಎಂಬ ವರದಿಯ ಬೆನ್ನಲ್ಲೇ ಅಮೆರಿಕ ತನ್ನ ದೇಶಕ್ಕೆ ಬರುತ್ತಿದ್ದ ಎಲ್ಲ ಪಿಐಎ ವಿಮಾನಗಳಿಗೆ ನಿಷೇಧ ಹೇರಿದೆ.
Advertisement
ಮೇ 22 ರಂದು ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ವಸತಿ ಪ್ರದೇಶದಲ್ಲಿ ಪಿಐಎ ವಿಮಾನ ಪತನಗೊಂಡು 97 ಮಂದಿ ಮೃತಪಟ್ಟಿದ್ದರು.
Advertisement
ಆರಂಭದಲ್ಲಿ ತಾಂತ್ರಿಕ ಕಾರಣದಿಂದ ವಿಮಾನ ಪತನ ಹೊಂದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ವೇಳೆ ಪಾಕಿಸ್ತಾನ ಇಬ್ಬರು ಪೈಲಟ್ಗಳು ಪ್ರಯಾಣದ ಉದ್ದಕ್ಕೂ ಕೊರೊನಾ ವೈರಸ್ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಕಡೆಯಿಂದ ಎಚ್ಚರಿಕೆ ಸಿಗ್ನಲ್ ಬಂದಿದ್ದರೂ ಅತಿಯಾದ ವಿಶ್ವಾಸದಿಂದ ಕಡೆಗಣಿಸಿದ್ದರು. ಪರಿಣಾಮ ವಿಮಾನ ಪತನವಾಗಿತ್ತು ಎಂದು ಸರ್ಕಾರ ತಿಳಿಸಿತ್ತು.
ಈ ಘಟನೆಯ ಬಳಿಕ ಎಚ್ಚೆತ್ತ ಪಾಕ್ ಸರ್ಕಾರ ತನಿಖೆ ನಡೆಸಿದಾಗ ಶೇ. 40 ರಷ್ಟು ಪೈಲಟ್ ಗಳ ಬಳಿ ಅಸಲಿ ಲೈಸೆನ್ಸ್ ಇಲ್ಲದಿರುವ ವಿಚಾರ ಬಳಕಿಗೆ ಬಂದಿತ್ತು. ಪಾಕ್ ವಿಮಾನಯಾನ ಸಚಿವ ಗುಲಾಂ ಸರ್ವಾರ್ ಖಾನ್ ಇರುವ 860 ಪೈಲಟ್ ಗಳಲ್ಲಿ 262 ಜನ ಪರೀಕ್ಷೆಯನ್ನೇ ಎದುರಿಸಿಲ್ಲ. ಇದರಲ್ಲಿ 54 ಪೈಲಟ್ ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು ಈಗಾಗಲೇ 9 ಜನ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದರು.