ಚಿರು ಸಾವಿನ ಪ್ರಸ್ತಾಪಕ್ಕೆ ಹಿರಿಯ ನಟ ದೊಡ್ಡಣ್ಣ ಬೇಸರ

Advertisements

-ಆ ಮಗುವಿಗೆ ನೋವು ಕೊಡೋದು ಬೇಡ

ಬೆಂಗಳೂರು: ನಾವು ಅಕ್ಕ-ತಂಗಿಯರ ಜೊತೆ ಹುಟ್ಟಿದ್ದೇವೆ. ನಮಗೂ ಮಕ್ಕಳಿವೆ. ಹೊಟ್ಟೆಯಲ್ಲಿ ಕಂದಮ್ಮನ ಹೊತ್ತಿಕೊಂಡಿರುವ ಆ ಮಗು ನೋವಲ್ಲಿದೆ. ಪತಿಯ ಕಳೆಬರಕ್ಕೆ ಮುತ್ತು ಕೊಟ್ಟಿರೋದನ್ನ ಇಡೀ ರಾಜ್ಯ ನೋಡಿದೆ. ಈಗ ಇಂತಹ ನೋವನ್ನ ಆ ಮಗುವಿನ ಕೊಟ್ಟರೆ ಹೇಗೆ? 70 ವರ್ಷದ ನಾಗರಿಕನಾಗಿ ಇಂತಹ ಆರೋಪಗಳನ್ನ ಕೇಳಿ ಮನಸ್ಸಿಗೆ ಕಷ್ಟ ಆಯ್ತು ಎಂದು ಹಿರಿಯ ನಟ ದೊಡ್ಡಣ್ಣ ಭಾವುಕರಾದ್ರು.

ನಮ್ಮ ತಾಯಾಣೆಗೂ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾ ಇಲ್ಲ. ಒಂದು ವೇಳೆ ಅಂತಹ ವ್ಯಕ್ತಿಗಳಿದ್ರೆ ಅವರಿಗೆ ಶಿಕ್ಷೆ ಆಗಲೇಬೇಕು. ಡ್ರಗ್ಸ್ ಮಾಫಿಯಾ ಇದೆ ಅನ್ನೋದು ನಮಗೆ ಗೊತ್ತಿಲ್ಲ ಮತ್ತು ಅದು ಯಾವ ರೀತಿ ಇರುತ್ತೆ ಬಗ್ಗೆಯೂ ಗೊತ್ತಿಲ್ಲ. ಎಷ್ಟೇ ಕೂಡಿ ಕಳೆದು ಗುಣಾಕಾರ ಭಾಗಾಕಾರ ಲೆಕ್ಕ ಹಾಕಿದ್ರೂ ತಪ್ಪಿತಸ್ಥರಿಗೆ ಶಿಕ್ಷೆ ಆಗುತೆ ಎಂದರು. .

Advertisements

ಡ್ರಗ್ ಮಾಫಿಯಾದ ಆರೋಪ ಮಾಡಿರುವ ನಿರ್ದೇಶಕರು ಸಿಸಿಬಿ ಪೊಲಿಸರಿಗೆ ಭೇಟಿಯಾಗಿ ದಾಖಲೆ ಕೊಟ್ಟಿದ್ದೇನೆ ಅಂತ ಹೇಳಿರೋದನ್ನ ಮಾಧ್ಯ ಮಗಳಲ್ಲಿ ನೋಡಿದ್ದೇನೆ. ದಾಖಲೆ ನೋಡಿ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದಿದ್ದಾರೆ ಅಂತ ಹೇಳಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು ಪೊಲೀಸರು ಎಲ್ಲವನ್ನ ಬಯಲು ಮಾಡುತ್ತಾರೆ ಎಂದು ತಿಳಿಸಿದರು.

Advertisements
Advertisements
Exit mobile version