– ಡೀಸೆಲ್ ಹಾಕಿಸಲು ರೋಗಿಗಳೇ ದುಡ್ಡು ಕೊಡ್ಬೇಕಂತೆ
ಚಿತ್ರದುರ್ಗ: ಒಂದ್ಕಡೆ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ ಆಗ್ತಿದ್ರೆ ಇತ್ತ ಚಿತ್ರದುರ್ಗದಲ್ಲಿ ಅಂಬುಲೆನ್ಸ್ನಲ್ಲಿ ಆಮ್ಲಜನಕ ಸಿಗದೇ ಕೋವಿಡ್ ರೋಗಿ ಮೃತಪಟ್ಟಿರುವ ದುರಂತ ನಡೆದಿದೆ.
Advertisement
ಅಂಬುಲೆನ್ಸ್ನಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೇ 65 ವರ್ಷದ ವೃದ್ಧೆಯೊಬ್ಬರು ಪ್ರಾಣಬಿಟ್ಟಿದ್ದಾರೆ. ಹಿರಿಯೂರು ನಗರದ ವೇದಾವತಿ ಬಡಾವಣೆಯ ಕೋವಿಡ್ ಸೊಂಕಿತ ವೃದ್ಧೆಯನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಿಂದ ದಾವಣಗೆರೆಗೆ ಅಂಬುಲೆನ್ಸ್ ಮೂಲಕ ಕರೆದೊಯ್ಯುವಾಗ ಮಾರ್ಗಮಧ್ಯೆ ವೃದ್ದೆ ಮೃತಪಟ್ಟಿದ್ದಾರೆ.
Advertisement
Advertisement
ಆಕ್ಸಿಜನ್ ಸಿಲಿಂಡರ್ ಬೇಕು ಐದು ಸಾವಿರ ರೂಪಾಯಿ ಕೊಡ್ಬೇಕು ಎಂದು ಸರ್ಕಾರಿ ಅಂಬುಲೆನ್ಸ್ ಚಾಲಕ ಕೇಳಿದ್ದ, 2 ಸಾವಿರ ರೂಪಾಯಿ ಕೊಟ್ಟಿದ್ದೇವೆ ಎಂದು ವೃದ್ಧೆಯ ಕುಟುಂಬಸ್ಥರು ಹೇಳುತ್ತಿದ್ದಾರೆ. ಸಾವಿಗೆ ನರ್ಸ್, ಅಂಬುಲೆನ್ಸ್ ಚಾಲಕನೇ ಕಾರಣ ಎಂದು ವೃದ್ಧೆಯ ಮಗ ತಿಮ್ಮರಾಜು ಆರೋಪಿಸಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಸರ್ಜನ್ ಡಾ ಬಸವರಾಜ್, ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಆಗಿಲ್ಲ. ಅಂಬುಲೆನ್ಸ್ ಚಾಲಕ ಕೇವಲ ಡೀಸೆಲ್ಗಾಗಿ ಹಣ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯ ಅಂಬುಲೆನ್ಸ್ಗೆ ಡೀಸೆಲ್ಗಾಗಿ ರೋಗಿಗಳು ಯಾಕೆ ದುಡ್ಡು ಕೊಡಬೇಕು ಎನ್ನುವುದು ಪ್ರಶ್ನೆ.