ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಬೈಕ್ ಕಳ್ಳತನ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೈಲಾನಿ ಬಾಷಾಸಾಬ ಗಂಜಿಗಟ್ಟಿ ಬಂಧಿತನಾಗಿದ್ದು, ಈತ ಕಲಘಟಗಿಯ ಬಸವೇಶ್ವರನಗರದ ನಿವಾಸಿ. ಪೊಲೀಸರು ಆರೋಪಿಯಿಂದ 9 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಹುಬ್ಬಳ್ಳಿಯಲ್ಲಿನ ಏಳು ಬೈಕ್ ಹಾಗೂ ಕಲಘಟಗಿ 2 ಬೈಕುಗಳನ್ನ ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ. 9 ಬೈಕುಗಳ ಮೌಲ್ಯ 2 ಲಕ್ಷ ರೂಪಾಯಿಗಳಾಗಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
Advertisement
Advertisement
ಬೈಕ್ ಕಳ್ಳತನದ ಬಗ್ಗೆ ಕಲಘಟಗಿಯ ಮಹ್ಮದರಫೀಕ್ ಮಕ್ತುಂಸಾಬ ಸನದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಇನ್ಸ್ ಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ಎಎಸ್ಐ ಕೆ.ಎಂ.ಮಠಪತಿ, ಸಿಬ್ಬಂದಿ ಎಸ್.ಡಿ.ಮಲ್ಲನಗೌಡರ, ಎನ್.ಎಂ.ಹೊನ್ನಪ್ಪನವರ, ಎಂ.ಎಲ್.ಪಾಶ್ಚಾಪುರ, ಚೆನ್ನಪ್ಪ ಬಳ್ಳೋಳ್ಳಿ, ಎನ್.ಎಂ.ಸಂಶಿ, ಎನ್.ಪಿ.ಮೇಟಿ, ಎನ್.ಬಿ.ಬೋಗೂರ, ಶಿವಾನಂದ ಕಾಂಬಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement