Connect with us

Chikkaballapur

ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತರಿಗೂ ಕೊರೊನಾ ಸೋಂಕು- ನಗರಸಭೆ ಸೀಲ್ ಡೌನ್

Published

on

ಚಿಕ್ಕಬಳ್ಳಾಪುರ: ನಗರಸಭೆ ಆಯುಕ್ತರಿಗೂ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಚಿಕ್ಕಬಳ್ಳಾಪುರ ನಗರಸಭೆ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದೆ.

ಕಳೆದ ಎರಡು ದಿನಗಳಿಂದ ಗಂಟಲು ಕೆರೆತ, ಜ್ವರದಿಂದ ಬಳಲುತ್ತಿದ್ದ ನಗರಸಭೆ ಆಯುಕ್ತರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ಸೋಂಕು ದೃಢವಾಗಿದೆ. ಹೀಗಾಗಿ ನಗರಸಭೆ ಅಧಿಕಾರಿ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲಾ ಕುಟುಂಬ ಹಾಗೂ ಆರೋಗ್ಯ ಇಲಾಖೆಯ ನಾಳಿನ ವರದಿಯಲ್ಲಿ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ.

ಇಂದು ಸಹ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ 19 ಮಂದಿಗೆ ಸೋಂಕು ದೃಢವಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 351ಕ್ಕೇರಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಮೂಲದ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯ ಸಾವಿನ ಕೊರೊನಾ ಸಾವಿನ ಸಂಖ್ಯೆ 13ಕ್ಕೇರಿದೆ. ಉಳಿದಂತೆ 218 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 120 ಸಕ್ರಿಯ ಪ್ರಕರಣಗಳಿವೆ.

Click to comment

Leave a Reply

Your email address will not be published. Required fields are marked *