CrimeLatestMain PostNational

ಗೆಳೆಯನ ಪತ್ನಿಯನ್ನ ನೋಡ್ತಿದ್ದಂತೆ ಕಾಮ ಪಿಶಾಚಿಯಾದ ಕರ್ನಲ್

– ಗೆಳೆಯನಿಗೆ ನಶೆ ಪದಾರ್ಥ ನೀಡಿ, ಪತ್ನಿಯ ಮೇಲೆ ರೇಪ್

ಲಕ್ನೋ: ಮನೆಗೆ ಪತ್ನಿ ಜೊತೆ ಬಂದ ಗೆಳೆಯನಿಗೆ ಮದ್ಯದಲ್ಲಿ ನಶೆ ಪದಾರ್ಥ ನೀಡಿ, ಮಹಿಳೆಯನ್ನ ಅತ್ಯಾಚಾರಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರನಲ್ಲಿ ನಡೆದಿದೆ. ಪತ್ನಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೆಂಟ್ರಲ್ ಆರ್ಡಿನೆನ್ಸ್ ಡಿಪಾರ್ಟ್‍ಮೆಂಟ್ ಕರ್ನಲ್ ಗೆಳೆಯನ ಪತ್ನಿಯನ್ನ ಅತ್ಯಾಚಾರಗೈದ ಆರೋಪಿ. ಕೆಲ ದಿನಗಳ ಹಿಂದೆ ಕರ್ನಲ್ ತನ್ನ ಸರ್ಕಾರಿ ಬಂಗಲೆಗೆ ಗೆಳೆಯ ಮತ್ತು ಆತನ ಪತ್ನಿಯನ್ನ ಔತಣಕೂಟಕ್ಕೆ ಆಹ್ವಾನಿಸಿದ್ದನು. ಗೆಳೆಯನ ಪತ್ನಿಯನ್ನ ನೋಡುತ್ತಿದ್ದಂತೆ ವಿಕೃತನಾದ ಕರ್ನಲ್ ಮದ್ಯದಲ್ಲಿ ನಶೆ ಪದಾರ್ಥ ಸೇರಿಸಿ ಸ್ನೇಹಿತನಿಗೆ ನೀಡಿದ್ದಾನೆ. ಇನ್ನು ಮದ್ಯ ಸೇವಿಸಿದ ಗೆಳೆಯ ನಿದ್ದೆಗೆ ಜಾರುತ್ತಿದ್ದಂತೆ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆ ಪತಿ ದೂರಿನನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧಿಸುವ ಪ್ರಯತ್ನದಲ್ಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡವನ್ನ ರಚಿಸಲಾಗಿದೆ. ರಾತ್ರಿ ಸುಮಾರು 9 ಗಂಟೆಗೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ ಎಂದು ಕಾನ್ಪುರ ಎಸ್.ಪಿ. ರಾಜಕುಮಾರ್ ಅಗರ್ವಾಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button