ಮುಂಬೈ: ಬಾಲಿವುಡ್ನ ಕರೀನಾ, ಸೈಫ್ ಜೋಡಿ ಇಷ್ಟು ದಿನ ತಮ್ಮ ಎರಡನೇ ಮಗ ಜೆಹ್ ಅಲಿ ಖಾನ್ ಫೋಟೋವನ್ನು ಕರೀನಾ ಕಪೂರ್ ಖಾನ್ ರಿವೀಲ್ ಮಾಡಿರಲಿಲ್ಲ. ಇದೀಗ ರಣಧೀರ್ ಕಪೂರ್ ಮನೆಗೆ ಫ್ಯಾಮಿಲಿ ಭೇಟಿಕೊಟ್ಟಿದ್ದಾರೆ. ಈ ವೇಳೆ ಆರು ತಿಂಗಳ ಕಂದಮ್ಮ ಜೆಹ್ನನ್ನು ಸೈಫ್ ಅಲಿ ಖಾನ್ ಎತ್ತಿಕೊಂಡಿದ್ದು, ಕ್ಯಾಮರಾ ಕಣ್ಣುಗಳು ಪುಟಾಣಿಯನ್ನು ಸೆರೆ ಹಿಡಿದಿವೆ.
Advertisement
ಕರೀನಾ ಮೊದಲನೇ ಪುತ್ರ ತೈಮೂರ್ ಅಲಿ ಖಾನ್ ಹಾಗೂ ಎರಡನೇ ಪುತ್ರ ಜೆಹ್ ಅಲಿ ಖಾನ್ ಲಾಲನೆ ಪಾಲನೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ನ ಸ್ಟಾರ್ ದಂಪತಿಗಳ ಮಕ್ಕಳ ಪೈಕಿ ತೈಮೂರ್ ಅಲಿ ಖಾನ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದ್ದಾನೆ. ಮೀಡಿಯಾ ಹಾಗೂ ಕ್ಯಾಮರಾ ಕಣ್ಣುಗಳಿಂದ ಎರಡನೇ ಪುತ್ರನನ್ನು ದೂರವಿಡಲು ದಂಪತಿ ಪ್ರಯತ್ನಿಸಿದರು. ಇದೇ ಕಾರಣಕ್ಕೆ ಈವರೆಗೂ ತಮ್ಮ ದ್ವಿತೀಯ ಪುತ್ರನ ಫೋಟೋವನ್ನು ಕರೀನಾ-ಸೈಫ್ ಬಹಿರಂಗಪಡಿಸಿರಲಿಲ್ಲ. ಆದ್ರೀಗ ಪುಟಾಣಿ ಜೆಹ್ ಅಲಿ ಖಾನ್ ಕ್ಯಾಮರಾ ಕಣ್ಣುಗಳಿಗೆ ಸೆರೆ ಸಿಕ್ಕಿದ್ದಾನೆ. ಇದನ್ನೂ ಓದಿ: ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ
Advertisement
View this post on Instagram
Advertisement
ಪುಟಾಣಿ ಜೆಹ್ ಅಲಿ ಖಾನ್ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಡಲು ಥೇಟ್ ತೈಮೂರ್ ಅಲಿ ಖಾನ್ನಂತೆಯೇ ಜೆಹ್ ಇದ್ದಾನೆ, ಅಮ್ಮನ ಪಡಿಯಚ್ಚು, ಜೆಹ್ ನೋಡಲು ತುಂಬಾ ಮುದ್ದಾಗಿದ್ದಾನೆ ಅಂತೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Advertisement
View this post on Instagram
ಇದೀಗ ರಣಧೀರ್ ಕಪೂರ್ ಮನೆಗೆ ಕರೀನಾ ಕುಟುಂಬ ಸಮೇತರಾಗಿ ಭೇಟಿಕೊಟ್ಟಿದ್ದಾರೆ. ಈ ವೇಳೆ ಆರು ತಿಂಗಳ ಕಂದಮ್ಮ ಜೆಹ್ನನ್ನು ಸೈಫ್ ಅಲಿ ಖಾನ್ ಎತ್ತಿಕೊಂಡಿದ್ದು, ಕ್ಯಾಮರಾ ಕಣ್ಣುಗಳು ಪುಟಾಣಿಯನ್ನು ಸೆರೆ ಹಿಡಿದಿವೆ. ಕರೀನಾ ಕಪೂರ್ ಖಾನ್ ಹಾಗೂ ತೈಮೂರ್ ಅಲಿ ಖಾನ್ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.