Bengaluru CityDistrictsKarnatakaLatestMain Post

ಕೊರೊನಾ ವಾರಿಯರ್ಸ್‍ಗೆ ಹೂಮಳೆಯಿಂದ ಅಭಿನಂದನೆ

ನೆಲಮಂಗಲ: ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದವರಿಗೆ ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಲಾಗಿದೆ.

ಕಳೆದ ಒಂದು ತಿಂಗಳಿಗೂ ಅಧಿಕ ದಿನಗಳಿಂದ ಸುಮಾರು 15 ಸಾವಿರ ದಿನಸಿ ಕಿಟ್ ವಿತರಿಸಿದ್ದ ಜಗದೀಶ್ ಚೌದರಿ ಅಭಿಮಾನಿ ಬಳಗ ಅಭಿನಂದನಾ ಸಮಾರಂಭವನ್ನು ಆಯೋಜಿಸಿತ್ತು. ಇದನ್ನೂ ಓದಿ: 50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಹೋಬಳಿಯಲ್ಲಿ ನಡೆದ ಕೋವಿಡ್ ವಾರಿಯರ್ಸ್ ಅಭಿನಂದನಾ ಸಮಾರಂಭಕ್ಕೆ, ಹೊನ್ನಮ್ಮಗವಿ ಮಠ ಶ್ರೀ ಹಾಗೂ ವನಕಲ್ಲು ಶ್ರೀ ಚಾಲನೆ ನೀಡಿದರು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಖಾಸಗಿ ಶಾಲಾ ಶಿಕ್ಷಕರಿಗೆ, ಪತ್ರಕರ್ತರಿಗೆ ಅಭಿನಂದನಾ ಸಲ್ಲಿಸಿ ಪುಷ್ಪವೃಷ್ಟಿ ಸುರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುರೇಶ್ ಗೌಡ, ಬೆಂಗಳೂರು ಜಿ.ಪಂ. ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ನಾಗರಾಜು ಇದ್ದರು. ಜಗದೀಶ್ ಚೌದರಿ ಅಭಿಮಾನಿ ಬಳಗ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಮನೆಗಳಿಗೆ ಆಹಾರ ಕಿಟ್ ವಿತರಣೆ ಮಾಡಿತ್ತು.

Leave a Reply

Your email address will not be published. Required fields are marked *

Back to top button