ಬೆಂಗಳೂರು: ಸತತ ಎರಡು ತಿಂಗಳಿನಿಂದ ಹಗಲು ಇರುಳೆನ್ನದೆ ಮನೆ, ಮಕ್ಕಳು, ಕುಟುಂಬ ಬಿಟ್ಟು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಹೋಮ್ ಗಾರ್ಡ್ ಸಿಬ್ಬಂದಿಗೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಶ್ರೀ ಸಾಯಿ ಫೌಂಡೇಶನ್ ಸಂಸ್ಥಾಪಕ ಬಿ. ಸುರೇಶ್ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
Advertisement
ಪೀಣ್ಯ, ಬಾಗಲಗುಂಟೆ ಹಾಗೂ ಪೀಣ್ಯ ಸಂಚಾರಿಯ ಹೋಮ್ ಗಾರ್ಡ್ ಸಿಬ್ಬಂದಿಗೆ ಆಹಾರದ ದಿನಸಿ ಕಿಟ್ ನೀಡಿ ಶ್ರೀ ಸಾಯಿ ಫೌಂಡೇಶನ್ ನೆರವಿಗೆ ದಾವಿಸಿದ್ದಾರೆ. ಈ ವೇಳೆ ಮಾತನಾಡಿದ ಫೌಂಡೇಶನ್ ಸಂಸ್ಥಾಪಕ ಬಿ.ಸುರೇಶ್, ಈ ಕೊರೊನಾ ವೈರಸ್ ಮಹಾಮಾರಿ ಸಾಕಷ್ಟು ರೀತಿಯಲ್ಲಿ ನಮ್ಮ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆತಂಕ ಸೃಷ್ಟಿಮಾಡುತ್ತಲೇ ಇದೆ. ಲಾಕ್ಡೌನ್ ವೇಳೆ ಸರ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮದೇ ರೀತಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
Advertisement
Advertisement
ಪೊಲೀಸ್ ಇಲಾಖೆಯ ಜೊತೆಗೆ ಹೋಮ್ ಗಾರ್ಡ್ ಸಿಬ್ಬಂದಿ ಸಹ ತಮ್ಮ ಕಾರ್ಯವನ್ನ ಈ ರಾಜ್ಯದ ಜನತೆಗೆ ನೀಡಿದ್ದು, ಅವರ ಕುಟುಂಬಕ್ಕೆ ನಮ್ಮ ಫೌಂಡೇಶನ್ ವತಿಯಿಂದ ಸಣ್ಣ ಪ್ರಮಾಣದ ಸಹಾಯ ಮಾಡುವ ಉದ್ದೇಶದಿಂದ ದಿನಸಿ ಕಿಟ್ ನೀಡಿದ್ದು ಸಂತಸ ತಂದಿದೆ ಬಿ.ಸುರೇಶ್ ಎಂದರು. ಈ ವೇಳೆ ಪೀಣ್ಯ ಸಂಚಾರಿ ಪೊಲೀಸ್ ಸಿಪಿಐ ರಾಜು, ಶ್ರೀ ಸಾಯಿ ಫೌಂಡೇಶನ್ನ ಬಿ.ಸುರೇಶ್, ಕೃಷ್ಣ ಮತ್ತಿತರು ಉಪಸ್ಥಿತರಿದ್ದರು.