ಬೆಂಗಳೂರು: ಕೊರೋನಾ ಲಸಿಕೆ ನೀಡಿಕೆ ಸಮೀಪ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲನೆಗೆ ಡೆಡ್ಲೈನ್ ನೀಡಲಾಗಿದೆ. ಇಂದಿನಿಂದ ಮುಂದಿನ 3 ದಿನ ಪಕ್ಕಾ ಟಾರ್ಗೆಟ್ ನೀಡಲಾಗಿದೆ. ಪಾಲಿಕೆ ವತಿಯಿಂದ ಬೇರೆ ಇಲಾಖೆಯ ಸಿಬ್ಬಂದಿ ಸಹ ಕೋವಿಡ್ ಲಸಿಕೆ ಕೆಲಸ ಮಾಡಬೇಕು ಎಂದು ಚರ್ಚೆ ನಡೆದಿದೆ.
ಇದೇ ವೇಳೆ ಈ ಮೇಲುಸ್ತುವಾರಿ ಕಾಯಲು ಎಲ್ಲ ವಲಯಗಳ ವಿಶೇಷ ಆಯುಕ್ತರಿಗೂ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಲಸಿಕೆ ಹಂಚಿಕೆ,ನೀಡಿಕೆ ವಲಯವಾರು ವಿಶೇಷ ಆಯುಕ್ತರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಸದ್ಯಕ್ಕೆ 1038 ಕೇಂದ್ರಗಳನ್ನು ಮತ್ತೊಮ್ಮೆ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತಿಮ ಪಟ್ಟಿ ಆರೋಗ್ಯ ಇಲಾಖೆಗೆ ತಲುಪಿಸಬೇಕಾಗಿದೆ.
Advertisement
Advertisement
ಕೊರೋನಾ ವ್ಯಾಕ್ಸಿನ್ ನೀಡುವ ಸೆಂಟರ್ ಗಳಲ್ಲಿ ಅಂತಿಮ ಕಸರತ್ತು ನಡೆಯುತ್ತಿದೆ. ಮೂರು ಪ್ರತ್ಯೇಕ ಕೊಠಡಿಗಳಲ್ಲಿ ಲಸಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ
Advertisement
ಯಾವ ಕೊಠಡಿಯಲ್ಲಿ ಏನು?
ಕಾಯುವ ಕೊಠಡಿ – ಲಸಿಕೆ ಹಾಕುವುದಕ್ಕೂ ಮುನ್ನ ವ್ಯಕ್ತಿ ಇಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯಬೇಕು..
ಲಸಿಕೆ ಕೊಠಡಿ – ಇಲ್ಲಿ ವ್ಯಕ್ತಿಗೆ ವೈದ್ಯರು ಅಥವಾ ವೈದ್ಯಾಧಿಕಾರಿ ಲಸಿಕೆ ಹಾಕುತ್ತಾರೆ
ಮೇಲ್ವಿಚಾರಣಾ ಕೊಠಡಿ – ಲಸಿಕೆ ಪಡೆದ ಬಳಿಕ ವ್ಯಕ್ತಿ 30 ನಿಮಿಷಗಳ ಕಾಲ ಕೊಠಡಿಯಲ್ಲಿ ಕುಳಿತುಕೊಳ್ಳಬೇಕು. ವ್ಯಕ್ತಿಯ ಮೇಲೆ ಲಸಿಕೆ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲೇಬೇಕು. ಒಂದು ವೇಳೆ ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು.