ಮುಂಬೈ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪರೋಕ್ಷವಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಮಾಡಿದ್ದಾರೆ.
Advertisement
ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಧ್ವನಿ ಎತ್ತಿದ್ದಾರೆ. ಅಲ್ಲದೇ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಸದ್ಯ ಪೆಟ್ರೋಲ್ ಬೆಲೆ ಏರಿಕೆ ಜನ ಸಾಮಾನ್ಯರ ಜೀವನದ ಮೇಲೆ ಬರೆ ಎಳೆದಂತಾಗಿದೆ. ಇಷ್ಟೆಲ್ಲ ಇದ್ದರೂ ಸೆಲೆಬ್ರೆಟಿಗಳು ಮಾತ್ರ ಈ ಬಗ್ಗೆ ಬಾಯಿ ಬಿಡದೇ ಗಪ್ಚುಪ್ ಆಗಿದ್ದಾರೆ. ಆದರೆ ಈ ಮಧ್ಯೆ ಬಾಲಿವುಡ್ ನಟಿ ಸನ್ನಿಲಿಯೋನ್ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದನ್ನು ವಿರೋಧಿಸಿದ್ದಾರೆ.
Advertisement
Advertisement
ಈ ಕುರಿತಂತೆ ಸನ್ನಿಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಸೈಕಲ್ ಜೊತೆ ನಿಂತು ಪೋಸ್ ನೀಡಿದ್ದಾರೆ. ಅಲ್ಲದೇ, ಕೊನೆಗೂ 100ರ ಗಡಿ ದಾಟಿಯೇ ಬಿಟ್ಟಿತು. ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ಎಂದು ಕ್ಯಾಪ್ಷನ್ನಲ್ಲಿ ಹಾಕಿದ್ದು, ಹೊಸ ಗ್ಲಾಮ್ನೊಂದಿಗೆ ಸೈಕಲ್ ಎಂದು ಹ್ಯಾಶ್ನಲ್ಲಿ ಬರೆದುಕೊಂಡಿದ್ದಾರೆ.
Advertisement
ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಕನ್ನಡದ ಕಾಟನ್ ಪೇಟೆ ಸಿನಿಮಾದ ಹಾಡೋದರಲ್ಲಿ ನೃತ್ಯ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಈ ಮುನ್ನ ಲವ್ ಯೂ ಅಲಿಯಾ ಸಿನಿಮಾದ ಕಾಮಾಕ್ಷಿ ಕಾಮಾಕ್ಷಿ.. ಹಾಗೂ ಡಿಕೆ ಸಿನಿಮಾದ ಸೆಸಮ್ಮ.. ಎಂಬ ಐಟಂ ಸಾಂಗ್ಗೆ ಹೆಜ್ಜೆಹಾಕಿದ್ದರು. ಇದನ್ನೂ ಓದಿ: ನನ್ನ ಮದುವೆಗೆ ಯಾರು ಬರಲ್ಲ ಅಂತೆ: ರಮ್ಯಾ
When it’s finally crossed ₹100…you gotta take care of your health!!
#Cycling is the new #GLAM ????♀️⛽️ pic.twitter.com/M6QSCnfLkD
— sunnyleone (@SunnyLeone) July 8, 2021