CinemaLatestMain PostSandalwood

ಕೈಗೆ ಗಾಯವಾಗಿದ್ದರೂ ಅತ್ಯುತ್ತಮ ಆಟ – ಡಿಯುಗೆ ಸಿಕ್ತು 3ನೇ ಸ್ಥಾನ

ಬಿಗ್ ಬಾಸ್ ಮನೆಯಲ್ಲಿ ಅರ್ವಿಯಾ ಜೋಡಿ ಎಂದೇ ಫೇಮಸ್ ಆಗಿದ್ದ ದಿವ್ಯಾ ಉರುಡುಗ ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ದಿವ್ಯಾ ಉರುಡುಗ ನಗುತ್ತಿದ್ದಾರೆ ಎಂದರೆ ಅಲ್ಲಿ ಅರವಿಂದ್ ಇದ್ದಾರೆ. ದಿವ್ಯಾ ಕಾಣಿಸಿಕೊಳ್ಳುವ ಪ್ರತಿ ಎಪಿಸೋಡ್‍ಲ್ಲಿ ಅರವಿಂದ್ ಕಾಣಿಸಿಕೊಳ್ಳುತ್ತಿದ್ದರು. ಈ ಮುದ್ದಾದ ಜೋಡಿ ಬಿಗ್‍ಬಾಸ್ ವೀಕ್ಷಕರಿಗೆ ಅತ್ಯಂತ ಹತ್ತಿರವಾದ ಜೋಡಿಯಾಗಿತ್ತು. ಬಿಗ್‍ಬಾಸ್ ಮನೆಯಲ್ಲಿ ಮೊದಲಿನಿಂದಲೂ ವೀಕ್ಷಕರನ್ನು ರಂಜಿಸುತ್ತಾ, ವೀಕ್ಷಕರ ಮನದಲ್ಲಿ ಆಳವಾಗಿ ಬೇರೂರಿದ ದಿವ್ಯಾ ಉರುಡುಗ ಟಾಪ್ 3ಯಲ್ಲಿ ಒಬ್ಬರಾಗಿದ್ದರು.

ಬಿಗ್‍ಬಾಸ್ ಮೊದಲ ಇನ್ನಿಂಗ್ಸ್ ಕೊನೆಯಲ್ಲಿ ಅನಾರೋಗ್ಯದ ನಿಮಿತ್ತವಾಗಿ ಆಚೆ ಬಂದಿದ್ದ ದಿವ್ಯಾ ಅವರು ಬಿಗ್‍ಬಾಸ್ ಫಿನಾಲೆ ಹಂತದವರೆಗೂ ಬರುತ್ತಾರೆ ಎಂದು ಯಾರೂ ಕೂಡಾ ಊಹೆ ಮಾಡಿರಲಿಲ್ಲ. ದಿವ್ಯಾ ಉರುಡುಗ ಆಟ ಎಂದು ಬಂದರೆ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಮನೆಯವರು ಜೊತೆಗೆ ಹೊಂದಿಕೊಂಡು ಕಿಲ ಕಿಲ ನಗುತ್ತಾ ರಂಜಿಸುತ್ತಿದ್ದರು.

2 ಬಾರಿ ಕ್ಯಾಪ್ಟನ್ ಆಗಿ ಆಯ್ಕೆ, ಒಂದು ಬಾರಿ ಕಿಚ್ಚನ ಚಪ್ಪಾಳೆ ಪಡೆದಿದ್ದ ದಿವ್ಯಾ ಮಹಿಳಾ ಸ್ಪರ್ಧಿಗಳ ಪೈಕಿ ಬಲಿಷ್ಠ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ನೇರ ನುಡಿ, ಆಟ, ಅರವಿಂದ್ ಜೊತೆಗೆ ಇರುವ ಒಳ್ಳೆಯ ಸ್ನೇಹ ಮತ್ತು ರಂಜಿನೆಯ ಶೈಲಿಯ ಮೂಲಕವಾಗಿ ಫಿನಾಲೆ ಹಂತದವರೆಗೂ ದಿವ್ಯಾ ಮನೆಯಲ್ಲಿ ಉಳಿದುಕೊಂಡಿದ್ದರು.

 

ದಿವ್ಯಾ, ಅರವಿಂದ್ ಅವರು ಬಿಗ್‍ಬಾಸ್ ಮನೆಯಲ್ಲಿ ಇರುವಷ್ಟು ದಿನ ವೀಕ್ಷಕರನ್ನು ಮುದ್ದಾಗಿ ರಂಜಿಸುತ್ತಾ ಬಂದಿದ್ದರು. ಕೈಗೆ ಗಾಯವಾಗಿದ್ದರೂ ದಿವ್ಯಾ ಆಟವನ್ನು ಮಾತ್ರ ಬಿಟ್ಟುಕೊಡುತ್ತಿರಲಿಲ್ಲ. ಕೊನೆಯವರೆಗೂ ಹೋರಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅರ್ವಿಯಾ ಜೋಡಿಯ ಮುದ್ದಾದ ವೀಡಿಯೋ ತುಣುಕುಗಳು ಹೆಚ್ಚು ಸುದ್ದಿಯಾಗುತ್ತಿದ್ದವು.

Leave a Reply

Your email address will not be published. Required fields are marked *

Back to top button