ತಿರುವನಂತಪುರಂ: ಟೀಂ ಇಂಡಿಯಾ ವಿಶ್ವಕಪ್ ಗೆದ್ದ ತಂಡದ ಬೌಲರ್ ಎಸ್.ಶ್ರೀಶಾಂತ್ ಕ್ರಿಕೆಟ್ಗೆ ಮತ್ತೆ ಕಮ್ಬ್ಯಾಕ್ ಮಾಡುವ ಮಾರ್ಗ ತೆರೆದುಕೊಂಡಿದೆ. ಫಿಕ್ಸಿಂಗ್ ಆರೋಪದ ಕಾರಣ 37 ವರ್ಷದ ಕ್ರಿಕೆಟಿಗ ಶ್ರೀಶಾಂತ್ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಸದ್ಯ ಬಿಸಿಸಿಐ ವಿಧಿಸಿದ್ದ ನಿಷೇಧದ ಶಿಕ್ಷೆ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ಇತ್ತ ನಿಷೇಧದ ಅವಧಿ ಮುಕ್ತಾಯವಾಗುತ್ತಿದಂತೆ ಮತ್ತೆ ಶ್ರೀಶಾಂತ್ ಅವರನ್ನು ತಂಡಕ್ಕೆ ಪರಿಗಣಿಸಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.
ರಣಜಿ ಟ್ರೋಪಿಗಾಗಿ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಪ್ರಕಟಿಸಿರುವ ಸಂಭವನೀಯ ರಣಜಿ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರನ್ನು ಸೇರಿಸಿದೆ. ಆದರೆ ಶ್ರೀಶಾಂತ್ ಕಮ್ಬ್ಯಾಕ್ ಆತನ ಫಿಟ್ನೆಸ್ ಮೇಲೆ ನಿರ್ಧಾರವಾಗಲಿದೆ. ಸಂಸ್ಥೆ ನಿರ್ವಹಿಸುವ ಫಿಟ್ನೆಸ್ ಪರೀಕ್ಷೆಯಲ್ಲಿ ಶ್ರೀಶಾಂತ್ ಉರ್ತೀರ್ಣರಾದರೆ ಮತ್ತೆ ಕ್ರೀಡಾಂಗಣದಲ್ಲಿ ಮಿಂಚುವ ಅವಕಾಶ ಲಭಿಸಲಿದೆ.
Advertisement
Advertisement
ಇತ್ತ ಕೆಸಿಎ ನಿರ್ಣಯದ ಕುರಿತು ಸಂತಸ ವ್ಯಕ್ತಪಡಿಸಿರುವ ಶ್ರೀಶಾಂತ್, ಕೆಸಿಎಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ದೊರೆತಿರುವ ಅವಕಾಶದಿಂದ ನನ್ನ ಉತ್ಸಾಹ ಹೆಚ್ಚಾಗಿದೆ. ರಣಜಿ ಆಡುವ ಅವಕಾಶ ಕೊಟ್ಟ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಫಿಟ್ನೆಸ್ ಸಾಬೀತು ಪಡಿಸಿ ಮತ್ತೆ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುತ್ತೇನೆ. ಎಲ್ಲಾ ವಿವಾದಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ ಎಂದು ಶ್ರೀಶಾಂತ್ ಹೇಳಿದ್ದಾರೆ.
Advertisement
ಕೆಸಿಎ ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ಬೌಲರ್ ಟಿನು ಯೊಹಾನನ್ ಅವರನ್ನು ತಂಡದ ಕೋಚ್ ಆಗಿ ನೇಮಿಸಿತ್ತು. ಈ ವೇಳೆ ಶ್ರೀಶಾಂತ್ ಕಮ್ ಬ್ಯಾಕ್ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು, ಶ್ರೀಶಾಂತ್ ಕಮ್ಬ್ಯಾಕ್ ತಂಡಕ್ಕೆ ಮತ್ತಷ್ಟು ಬಲವನ್ನು ನೀಡಲಿದೆ. ಆದರೆ ಆತನ ಫಿಟ್ನೆಸ್ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಶ್ರೀ ತಂಡಕ್ಕೆ ಬಂದರೇ ಆತನ ಅನುಭವ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.
Advertisement
View this post on Instagram