ನವದೆಹಲಿ: ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ತನ್ನ ಆಟವನ್ನು ಟೀಕಿಸಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರನ್ನು ಹನುಮ ವಿಹಾರಿ ಟ್ರೋಲ್ ಮಾಡಿದ್ದಾರೆ.
ಸಿಡ್ನಿ ಟೆಸ್ಟ್ ನಲ್ಲಿ ಭಾರತ ತಂಡದ ಕ್ರಿಕೆಟಿಗ ಹನುಮ ವಿಹಾರಿ ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಮತ್ತು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೊ ಟ್ವೀಟ್ ಮಾಡಿದ್ದರು.
Advertisement
*Hanuma Vihari
— Hanuma vihari (@Hanumavihari) January 13, 2021
Advertisement
ಈ ಟ್ವೀಟ್ನಲ್ಲಿ ಹನುಮ ವಿಹಾರಿ ಪದವನ್ನು ಬರೆಯುವ ಸಂದರ್ಭದಲ್ಲಿ ಹನುಮ ಬಿಹಾರಿ ಎಂದು ಬರೆದಿದ್ದರು. ಇಂದು ಹನುಮ ವಿಹಾರಿ ಟ್ವೀಟ್ ಮಾಡಿ ನಕ್ಷತ್ರ ಗುರುತು ಹಾಕಿ ಹನುಮ ವಿಹಾರಿ ಎಂಬುದಾಗಿ ಟ್ರೋಲ್ ಮಾಡಿದ್ದಾರೆ. ಈ ಟ್ವೀಟ್ನ ಸ್ಕ್ರೀನ್ ಶಾಟ್ ತೆಗೆದು ಅಶ್ವಿನ್ ROFLMAX!! ಎಂದು ಬರೆದು ಮೂರು ನಗುವ ಇಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ.
Advertisement
ROFLMAX!! ???????????? pic.twitter.com/gIHpngYg3E
— Ashwin ???????? (@ashwinravi99) January 13, 2021
Advertisement
ಸುಪ್ರಿಯೊ ಟ್ವೀಟ್ನಲ್ಲಿ ಏನಿತ್ತು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ, ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ.
ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಐತಿಹಾಸಿಕ ಗೆಲುವಿನ ಅವಕಾಶವಿದ್ದರೂ, 109 ಎಸೆತ ಎದುರಿಸಿದ ಹನುಮ ಬಿಹಾರಿ ಕೇವಲ 7 ರನ್ ಗಳಿಸಿ ಕ್ರಿಕೆಟ್ ಕೊಲೆ ಮಾಡಿದ್ದಾರೆ. ಕ್ರಿಕೆಟ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು.
If people don’t know what is test cricket and what the situations were . It will be better if they keep quiet. This is utter nonsense. This Hanuma Vihari innings as good as an innings played by Ab devillers in Adelaide 2012. If he was to go for shots we would have lost it .
— kiran (@cric_kiran) January 13, 2021
ಈ ಟ್ವೀಟ್ ನೋಡಿ ನೆಟ್ಟಿಗರು ಗರಂ ಆಗಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಬಗ್ಗೆ ತಿಳಿಯದ ನೀವು ರಾಜಕೀಯದಲ್ಲೇ ಇರಿ. ಕ್ರಿಕೆಟ್ ಬಗ್ಗೆ ವಿಶ್ಲೇಷಣೆ ನೀಡಬೇಡಿ ಎಂದು ಗರಂ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.