KarnatakaLatestMain PostSandalwood

ಕೆಜಿಎಫ್ ಶೂಟಿಂಗ್ ಬಳಿಕ ಮಕ್ಕಳ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಯಶ್

ಬೆಂಗಳೂರು: ಕೆಜಿಎಫ್-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಇದೀಗ ವಿಶ್ರಾಂತಿಗೆಂದು ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.

ಕೋವಿಡ್ 19 ಲಾಕ್‍ಡೌನ್ ತೆರವಾದ ಬಳಿಕ ಯಶ್ ಕೆಜಿಎಫ್ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲಾಗಿರಲಿಲ್ಲ. ಆದರೆ ಈಗ ಇಬ್ಬರು ಮಕ್ಕಳೊಂದಿಗೆ ಯಶ್ ಮಾಲ್ಡೀವ್ಸ್‌ ತಾಣದಲ್ಲಿದ್ದಾರೆ.

ಕುಟುಂಬದೊಂದಿಗೆ ಸಂಭ್ರಮಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯಶ್, ಸ್ವರ್ಗ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್‌ ಮಾತ್ರ ಎಂದು ಬರೆದಿದ್ದಾರೆ. ಕೆಲವು ತಿಂಗಳ ಹಿಂದೆ ಮಗನ ಹುಟ್ಟುಹಬ್ಬವನ್ನು ಗೋವಾದ ಐಶಾರಾಮಿ ಯಾಚ್‍ನಲ್ಲಿ ಯಶ್, ರಾಧಿಕಾ ಆಚರಿಸಿದ್ದರು.

ಕಳೆದ ವಾರ ಯಶ್ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಮುಹೂರ್ತ ಸಮಾರಂಭಕ್ಕೆಂದು ಹೈದರಾಬಾದ್‍ಗೆ ತೆರಳಿದ್ದರು. ಬಹು ನಿರೀಕ್ಷಿತ ಕೆಜಿಎಫ್ ಟೀಸರ್ ಜ.7 ರಂದು ಬಿಡುಗಡೆಯಾಗಿದ್ದು ಇಲ್ಲಿಯವರೆಗೆ 15 ಕೋಟಿ ವೀಕ್ಷಣೆ ಪಡೆಯುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದಿದೆ.

Leave a Reply

Your email address will not be published.

Back to top button