Connect with us

Bagalkot

ಕಾಡು ಮೊಲ, ನವಿಲು ಹಿಡಿದು ಟಿಕ್ ಟಾಕ್- ಆರೋಪಿ ಅಂದರ್

Published

on

ಬಾಗಲಕೋಟೆ: ಕಾಡು ಮೊಲ ಹಾಗೂ ನವಿಲು ಹಿಡಿದು ಟಿಕ್ ಟಾಕ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆ ನಡೆದಿದೆ.

ಹುನಗುಂದ ತಾಲೂಕಿನ ಅಮೀನಗಡ ಬಳಿಯ ಮದಾಪುರ ಗ್ರಾಮದ ವಿಠ್ಠಲ್ ವಾಲಿಕಾರ ಬಂಧಿತ ಆರೋಪಿ. ವಿಠ್ಠಲ್ ರಾಷ್ಟ್ರಪಕ್ಷಿಯಾದ ನವಿಲು ಹಾಗೂ ಕಾಡು ಮೊಲವನ್ನು ಬೇಟೆಯಾಡುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ಹಿಡಿದು ವಿಡಿಯೋ ಮಾಡಿ ಟಿಕ್ ಟಾಕ್‍ನಲ್ಲಿ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹುನಗುಂದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಆರೋಪಿ ವಿಠ್ಠಲ್‍ಗೆ ಬಲೆ ಬೀಸಿ ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಆರೋಪಿಯನ್ನ ಬಂಧಿಸಿ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *