ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ಕಲಬುರಗಿ-ಮುಂಬೈ (ಬೆಂಗಳೂರು ಮತ್ತು ಬೆಳಗಾವಿ) ಮಾರ್ಗವಾಗಿ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ ಮುಂದಾಗಿದೆ.
ಪ್ರಸ್ತುತ ಸ್ಟಾರ್ ಏರ್ ಸಂಸ್ಥೆ ಪ್ರತಿ ಶನಿವಾರದಂದು ಮಾತ್ರ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದ್ದು, ಇದೇ ಜೂನ್ 13ರಂದು ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಕಲಬುರಗಿ-ಮುಂಬೈ ನಡುವೆ ಸಂಸ್ಥೆಯ ವಿಮಾನ ಸಂಚರಿಸಲಿದೆ. ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ ಎಂದು ಸ್ಟಾರ್ ಏರ್ ಸಂಸ್ಥೆ ತಿಳಿಸಿದೆ.
Advertisement
Advertisement
OG-118 ಸಂಖ್ಯೆಯ ವಿಮಾನ ಕಲಬುರಗಿಯಿಂದ ಬೆಳಗ್ಗೆ 10.20ಗಂಟೆಗೆ ಹೊರಟು 11.25ಕ್ಕೆ ಬೆಂಗಳೂರು ತಲುಪಲಿದೆ. ಇದೇ ವಿಮಾನ OG-105 ಸಂಖ್ಯೆಯೊಂದಿಗೆ 1 ಗಂಟೆಗೆ ಬೆಳಗಾವಿಗೆ ಹಾಗೂ OG-111 ಸಂಖ್ಯೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.40 ಗಂಟೆಗೆ ಲ್ಯಾಂಡ್ ಆಗಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ ನಿರ್ದೇಶಕ ಜ್ಣಾನೇಶ್ವರರಾವ್ ತಿಳಿಸಿದ್ದಾರೆ.