Bengaluru CityDistrictsKarnatakaLatestMain Post

ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ರವಿಕುಮಾರ್ ನೇಮಕ

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ರವಿಕುಮಾರ್ ನೇಮಕವಾಗಿದ್ದಾರೆ. ಪಿ ರವಿಕುಮಾರ್ ಅವರನ್ನು ಮಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿ ಇಂದು ಸರ್ಕಾರ ಆದೇಶಿಸಿದೆ.

ಹಾಲಿ ಸಿಎಸ್ ಟಿ ಎಂ ವಿಜಯ್ ಭಾಸ್ಕರ್ ಸೇವಾವಧಿ ನಾಳೆ ಮುಕ್ತಾಯವಾಗಲಿದ್ದು, ತೆರವಾಗಲಿರುವ ಸ್ಥಾನಕ್ಕೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿರುವ ಪಿ ರವಿಕುಮಾರ್‌ನ್ನು  ನೇಮಿಸಲಾಗಿದೆ.

ಪಿ ರವಿಕುಮಾರ್ 1984ರ ಬ್ಯಾಚ್  ಐಎಎಸ್ ಅಧಿಕಾರಿಯಾಗಿದ್ದಾರೆ. ನಾಳೆ ವಿಧಾನಸೌಧದಲ್ಲಿ ಪಿ ರವಿಕುಮಾರ್‌ಗೆ ವಿಜಯಭಾಸ್ಕರ್ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಪಿ ರವಿಕುಮಾರ್ ಸರ್ಕಾರದ 38ನೇ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

1984 ಬ್ಯಾಚ್‍ನ ಅಧಿಕಾರಿಯಾಗಿರುವ ರವಿ ಕುಮಾರ್ ಹಿರಿತನದ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಕರ್ನಾಟಕ ಕೇಡರ್‌ನ  ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ, ಸಹಕಾರ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕೆಪಿಟಿಸಿಎಲ್ ಎಂಡಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರವಿ ಕುಮಾರ್ ಅವರ ಸೇವಾವಧಿ 2022ರ ಮೇ ವರೆಗೆ ಇದೆ. 1 ವರ್ಷ 5 ತಿಂಗಳು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ರವಿ ಕುಮಾರ್ ಸೇವೆಯಲ್ಲಿ ಇರಲಿದ್ದಾರೆ

Leave a Reply

Your email address will not be published.

Back to top button