Connect with us

Bengaluru City

ಕೊರೊನಾ ಸಂಕಷ್ಟದಲ್ಲಿಯೂ ಗ್ರಾಹಕರಿಗೆ ಆಫರ್ ಕೊಟ್ಟ ಕೆಎಂಎಫ್

Published

on

ಬೆಂಗಳೂರು: ರಾಜ್ಯದಲ್ಲಿ ಮನೆ ಮಾತಾಗಿರುವ ಮನೆ ಮನೆಗೂ ಹಾಲು ತಲುಪಿಸುತ್ತಿರುವ ಕೆಎಂಎಫ್ ಸಂಸ್ಥೆ ಇನ್ನಷ್ಟು ಜನಸ್ನೇಹಿಯಾಗುವದಕ್ಕೆ ಮುಂದಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಗ್ರಾಹಕರಿಗೆ ಕೆಎಂಎಫ್ ಬಂಫರ್ ಆಫರ್ ನೀಡಿದೆ.

ನಂದಿನಿ ಚೀಸ್ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಗ್ರಾಹಕರನ್ನು ಸೆಳೆಯಲು ಪ್ರಪ್ರಥಮ ಭಾರಿಗೆ 85ರೂ. ಮೌಲ್ಯದ 200ಗ್ರಾಂ ನಂದಿನಿ ಪನ್ನೀರ್ ಖರೀದಿಸುವವರಿಗೆ 75ರೂ. ಮೌಲ್ಯದ 100ಗ್ರಾಂ ನಂದಿನಿ ಚೀನ್ ಸ್ಲೈಸ್‍ನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ಕೆಎಂಎಫ್ ಮುಂದಾಗಿದೆ. ಈ ಯೋಜನೆ 5 ದಿನಗಳವರೆಗೆ ಜಾರಿಗೊಳಿಸಲಾಗುತ್ತಿದ್ದು, ಗ್ರಾಹಕರು ಈ ಆಫರ್ ಉಪಯೋಗಿಸಿಕೊಳ್ಳಿ ಎಂದು ಕೆಎಂಎಫ್ ಮನವಿ ಮಾಡಿದೆ.

ನಂದಿನಿ ಚೀಸ್ ಉತ್ಪನ್ನದಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಜೀವಸತ್ವಗಳು ಹಾಗೂ ಖನಿಜಗಳು ಹೆಚ್ಚಾಗಿರುವದರಿಂದ ಮನುಷ್ಯನ ದೇಹದ ಸ್ನಾಯು ಮತ್ತು ಮೂಳೆಯನ್ನ ಬಲಪಡಿಸುವ ಶಕ್ತಿ ಇದೆ. ಚೀಸ್‍ನಲ್ಲಿರುವ ಮಿಟಮಿನ್ ಬಿ ಜೀವಕೋಶಗಳ ಬೆಳವಣಿಗೆಗೆ ಸಹಾಯಕವಾಗಲಿದೆ. ಗ್ರಾಹಕರು ಕೋವಿಡ್ ಸಂಕಷ್ಟದಲ್ಲಿ ಈ ಆಫರ್ ಅನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿಸಿ.ಸತೀಶ್ ಮನವಿ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *