ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಖತರ್ನಾಕ್ ಕಳ್ಳನೊಬ್ಬ ಕದ್ದ ಚಿನ್ನವನ್ನು ಐಸ್ಕ್ರೀಂ ಜೊತೆ ತಿಂದು ಸಿಕ್ಕಿ ಹಾಕಿಕೊಂಡಿದ್ದಾನೆ.
ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಅಂಬಳೂರಿನ ಶಿಬು ಎಂಬಾತನೇ ಈ ಅತೀ ಬುದ್ದಿವಂತ ಕಳ್ಳನಾಗಿದ್ದಾನೆ. ಮಾರ್ಚ್ 31ರ ರಾತ್ರಿ ಸುಳ್ಯ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೋಹನ ಜ್ಯುವೆಲ್ಲರಿ ಮಾರ್ಟ್ನಲ್ಲಿ ಹಾಗೂ ಪುತ್ತೂರಿನ ಜ್ಯುವೆಲ್ಲರ್ ಒಂದರಲ್ಲಿ ಕಳ್ಳತನ ನಡೆದಿತ್ತು. ಏಳೂವರೆ ಲಕ್ಷ ಮೌಲ್ಯದ 180 ಗ್ರಾಂ ಚಿನ್ನ ಹಾಗೂ 50 ಸಾವಿರ ನಗದು ಸಹಿತ ಕಳ್ಳರು ದೋಚಿದ್ದರು. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?
Advertisement
Advertisement
ಈ ಕಳ್ಳತನ ಪ್ರಕರಣ ಸಂಬಂಧ ಸುಳ್ಯ ಪೊಲೀಸರು ಕೇರಳದ ತಂಗಚ್ಚ ಯಾನೆ ಮ್ಯಾಥ್ಯೂ ಮತ್ತು ಶಿಬುವನ್ನು ಬಂಧಿಸಿದ್ದರು. ಬಂಧನದ ಸಂದರ್ಭ ತನ್ನ ಬಳಿಯಿದ್ದ ಚಿನ್ನದಲ್ಲಿ 35 ಗ್ರಾಂ ಚಿನ್ನವನ್ನು ಶಿಬು ನುಂಗಿದ್ದಾನೆ. ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಿಸಿ ಎಕ್ಸ್ ರೇ ಮಾಡಿದ ಸಂದರ್ಭ ಚಿನ್ನ ನುಂಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮದುವೆಯಾದ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ ಪ್ರಣೀತಾ..!
Advertisement
Advertisement
ಪ್ರಾರಂಭದಲ್ಲಿ 147 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆ ಬಳಿಕ ಶಿಬು ಆರೋಗ್ಯದಲ್ಲಿ ಏರುಪೇರು ಆಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲುಮಾಡಿ ಎಕ್ಸ್ ರೇ ಮಾಡಿದ ಸಂದರ್ಭ ಹೊಟ್ಟೆಯಲ್ಲಿ ಆಭರಣ ಪತ್ತೆಯಾಗಿದೆ. ಹೀಗಾಗಿ ವೈದ್ಯರು ಆಪರೇಷನ್ ನಡೆಸಿ ಹೊಟ್ಟೆಯಿಂದ 35 ಗ್ರಾಂ ಚಿನ್ನವನ್ನು ಹೊರ ತೆಗೆದಿದ್ದಾರೆ. ನುಂಗಿದ್ದ ಚಿನ್ನದಲ್ಲಿ 25ಕ್ಕೂ ಹೆಚ್ಚು ಉಂಗುರ ಇದ್ದು, ಕಿವಿಯ ಆಭರಣವೂ ಕಂಡು ಬಂದಿದೆ. ಇದನ್ನೂ ಓದಿ: ಮುಹೂರ್ತದ ಹೊತ್ತಿಗೆ ಶವವಾದ ವಧು- ತಂಗಿಗೆ ತಾಳಿ ಕಟ್ಟಿದ ವರ
ಬಂಧನದ ಸಂದರ್ಭ ಪೊಲೀಸರಿಂದ ಮರೆ ಮಾಚುವುದಕ್ಕೆ ಶಿಬು ಆಭರಣ ನುಂಗಿದ್ದ ಎಂದು ವಿಚಾರಣೆ ಸಂದರ್ಭ ಗೊತ್ತಾಗಿದೆ. ಒಟ್ಟಿನಲ್ಲಿ ಆರೋಪಿ ಶಿಬು ಘನಂದಾರಿ ಕೆಲಸ ಮಾಡಿ, ಆಭರಣ ನುಂಗಿ ತನ್ನ ಆರೋಗ್ಯಕ್ಕೆ ಆಪತ್ತು ತಂದುಕೊಂಡಿದ್ದ. ಸದ್ಯ ಜೀವಾಪಾಯದಿಂದ ಶಿಬು ಪಾರಾಗಿದ್ದು, ನ್ಯಾಯದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.