Bengaluru CityCinemaKarnatakaLatestMain PostSandalwood

ಒಡೆದ ಮನಗಳ ಸರಿ ಮಾಡಿ: ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿಗೆ ಜಗ್ಗೇಶ್ ಮನವಿ

ಬೆಂಗಳೂರು: ಚಂದನವನದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದು, ಉದ್ಯಮದ ಹಿರಿಯರು ಮತ್ತು ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಗಳ ಸರಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಜಗ್ಗೇಶ್, ಹಲವು ವಿಷಯದ ಜೊತೆ ತಮ್ಮ ಕಷ್ಟದ ದಿನಗಳನ್ನು ತಿಳಿಸಿದ್ದಾರೆ. ಜೊತೆಗೆ ತಮ್ಮ ವೃತ್ತಿ ಆರಂಭದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಜಗ್ಗೇಶ್ ಹೇಳಿದ್ದೇನು?
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಗ್ರಾಮದ ಸಣ್ಣ ಕುಟುಂಬದ ಹಳ್ಳಿಹುಡುಗ ನಾನು ಈಶ್ವರ್ ಗೌಡ, ಜಗ್ಗೇಶ್. ಅಂದು ಡಾ.ರಾಜ್‍ಕುಮಾರ್ ಅವರನ್ನು ಕಂಡು ಆಶೀರ್ವಾದ ಪಡೆದು ಸಿನಿಮಾ ನಟಗನಾಗಬೇಕು ಎಂಬುವುದು ನನ್ನ ಗುರಿಯಾಗಿತ್ತು. 1980ರಲ್ಲಿ ಈ ಕಾರ್ಯ ಆರಂಭಗೊಂಡಿತು. ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ. ಆ ಮುಖಕ್ಕೆ ಆಕಾಲಕ್ಕೆ ಸಿನಿಮಾ ನಟ ಆಗುವ ಕನಸು? ಈಗಿನ ಜಗ್ಗೇಶನ ಮರೆತು ಇದು ಸಾಧ್ಯನಾ ಎಂದು ಒಮ್ಮೆ ಯೋಚಿಸಿ. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

ಉಗಿದು ಮುಚ್ಕೊಂಡು ಅನ್ನ ಸಿಗುವ ಕೆಲಸ ನೋಡಿಕೊಳ್ಳಬೇಕು ಎಂದು ಆಗ ಅಪ್ಪ-ಅಮ್ಮ ಬಂಧು ಮಿತ್ರರು ಹೇಳಿದ್ದರು. ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗ ಮುಂಡೆದೆ ಎಂದು ಹೇಳುತ್ತಿದ್ದರು. ಗುರು ಹಿಂದೆ ಗುರಿ ಮಂದೆ ಹಠ ಬಿಡಲಿಲ್ಲ. ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡಮುಟ್ಟಿದೆ ಎಂದು ಬಿಟ್ಟರೆ ಆತ್ಮ ದ್ರೋಹ ಆಗಿಬಿಡುತ್ತದೆ. ಕಾರಣ ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು. ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೇ ಬರಹ ಮಾಧ್ಯಮ. ನೆನಪಿಡಿ ಇಂದು ನೂರಾರು ಮಾಧ್ಯಮಗಳಿವೆ. ಅಂಗೈಯಲ್ಲೆ ಆಕಾಶ ತೋರಿ ಹತ್ತಾರು ವರ್ಷ ಸಾಧನೆ ಕ್ಷಣ ಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲವೇ ಸಾಮಾಜಿಕ ಜಾಲತಾಣ. ಇದು ಸಿಕ್ಕಸಿಕ್ಕವರ ಕೈಯಲ್ಲಿ ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆ ಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು? ವಿಪರ್ಯಾಸ ದಿನಗಳು. ಇಂದಿನ ಸಾರ್ವಜನಿಕ ಜೀವನ ಸಾರ್ವಜನಿಕ ಶೌಚಾಲಯದಂತೆ ಆಗಿದೆ. ಆದರೂ ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು. ಇದನ್ನೂ ಓದಿ: ಇಂಡಸ್ಟ್ರಿ ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ- ದರ್ಶನ್ ವಿರುದ್ಧ ರಕ್ಷಿತಾ ಬೇಸರ

ಉದ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ:
ಮಾನ್ಯರೇ, ನಶ್ವರ ಬಣ್ಣದ ಬದುಕು. ಕಲಾವಿದನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು. ಎಲ್ಲಿಯವರೆಗು ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆ ದೇವರಂತೆ ಹೊರ ಬರಬೇಕು. ಆಗ ದೇವರಪರ ಅದ್ಭುತ ಅನನ್ಯ ದಿನ. ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲ. ರಾಜನಾಗಲಿ, ಸೇವಕನಾಗಲಿ ಜಗಳ ಘರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು. ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು.  ಇದನ್ನೂ ಓದಿ: ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ

ಆತ್ಮೀಯ ಮಾಧ್ಯಮ ಮಿತ್ರರು ಕಲಾರಂಗದ ನಮ್ಮ ಕಾಯಕ ಜನರಿಗೆ ತಲುಪಿಸೋ ನಾವಿಕರು. ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೂ ನೋವಾದರು ನಮಗೆ ನಷ್ಟ. ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ ವಿನಂತಿ. ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ. ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಎಂದು ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಅವ್ರೇ ನನಗ್ಯಾವ ಕೊಂಬೂ ಬರ್ಲಿಲ್ಲ, ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ: ಪ್ರೇಮ್

Leave a Reply

Your email address will not be published.

Back to top button