ಮುಂಬೈ: ಮಹಾಮಾರಿ ಕೊರೊನಾ ವೈರಸ್ ತನ್ನ ರೌದ್ರನರ್ತನವನ್ನು ತೋರಿಸುತ್ತಿದೆ. ಇತ್ತ ಮೃತದೇಹಗಳ ಅಂತ್ಯಕ್ರಿಯೆಗೂ ಪರದಾಡುವಂತಾಗಿದೆ. ಅಂತೆಯೇ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಒಂದೇ ವಾಹನದಲ್ಲಿ 22 ಮೃತದೇಹಗಳನ್ನು ಸಾಗಿಸಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಬೀಡ್ ಜಿಲ್ಲಾಡಳಿತವು ಸ್ಥಳಕ್ಕೆ ಧಾವಿಸಿ ಈ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.
Advertisement
Advertisement
ಒಂದೇ ವಾಹನದಲ್ಲಿ ಕೊರೊನಾ ಸೋಂಕಿತರ ಮೃತದೇಹಗಳನ್ನು ಸಾಗಿಸುತ್ತಿರುವುದನ್ನು ಗಮನಿಸಿದ ಕೆಲವರು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರ ಫೋನ್ ಗಳನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಹೀಗೆ ಫೋನ್ ಕಸಿದುಕೊಂಡ ಪೊಲೀಸರು ಮೃತರ ಅಂತ್ಯಕ್ರಿಯೆ ಮುಗಿದ ಬಳಿಕವೇ ಹಿಂದುರಿಗಿಸಿದ ಪ್ರಸಂಗವೂ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
Advertisement
ವಾಹನದಲ್ಲಿದ್ದ ಈ 22 ಶವಗಳು ಅಂಬಜೋಗೈನ ಸ್ವಾಮಿ ರಾಮಾನಂದ್ ತೀರ್ಥ್ ಮರಾಠವಾಡ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿದ್ದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೀಡ್ ಜಿಲ್ಲಾಧಿಕಾರಿ ರವೀಂದ್ರ ಜಗ್ತಾಪ್ ಅವರು ಈ ಬಗ್ಗೆ ತನಿಖೆ ನಡೆಸಲು ಅಂಬಜೋಗೈ ಹೆಚ್ಚುವರಿ ಸಂಗ್ರಾಹಕರಿಗೆ ಆದೇಶಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
Advertisement
ಶವಗಳನ್ನು ಶವಾಗಾರಕ್ಕೆ ಕೊಂಡೊಯ್ಯಲು ಕೇವಲ ಎರಡು ಅಂಬುಲೆನ್ಸ್ಗಳಿವೆ. ಹೆಚ್ಚಿನ ಅಂಬುಲೆನ್ಸ್ಗಳನ್ನು ನಾವು ಒತ್ತಾಯಿಸಿದ್ದೇವೆ. ಕೊನೆಯ ವಿದಿ-ವಿಧಾನಗಳನ್ನು ನಿರ್ವಹಿಸಲು ದೇಹಗಳನ್ನು ಅಂಬಜೋಗೈ ನಾಗರಿಕ ಸಂಸ್ಥೆಗೆ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ. ನಾಗರಿಕ ಸಂಸ್ಥೆ ಏನು ಮಾಡುತ್ತದೆ ಎಂಬುದು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಎಸ್ಆರ್ಟಿಎಂಜಿಎಂಸಿ ಡೀನ್ ಡಾ.ಶಿವಾಜಿ ಸುಕ್ರೆ ಮಾಹಿತಿ ನೀಡಿದ್ದಾರೆ.