Connect with us

Corona

ಎರಡೆರಡು ಬಾರಿ ಸೀಲ್‍ಡೌನ್- 4 ತಿಂಗಳ ನಂತ್ರ ರಾಮನಗರ ಕಾರಾಗೃಹ ಓಪನ್

Published

on

ರಾಮನಗರ: ಎರಡೆರಡು ಬಾರಿ ಸೀಲ್‍ಡೌನ್ ಆಗಿದ್ದ ರಾಮನಗರ ಕಾರಾಗೃಹ ಸತತ ನಾಲ್ಕು ತಿಂಗಳ ಬಳಿಕ ಮುಕ್ತವಾಗಿದೆ.

ಕಳೆದ 4 ತಿಂಗಳ ಹಿಂದೆ ಪಾದರಾಯನಪುರ ಪ್ರಕರಣದ ಆರೋಪಿಗಳನ್ನ ತಂದು ಹಾಕಿದ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದಲ್ಲದೆ ಸೀಲ್‍ಡೌನ್ ಆಗಿತ್ತು. ಅದಾದ ಬಳಿಕ ಮತ್ತೆ ಕಾರಾಗೃಹದ ವಾರ್ಡನ್‍ಗೆ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸೀಲ್‍ಡೌನ್ ಮುಂದುವರಿಸಲಾಗಿತ್ತು. ಸತತ ನಾಲ್ಕು ತಿಂಗಳ ಬಳಿಕ ಇದೀಗ ರಾಮನಗರ ಜಿಲ್ಲಾ ಕಾರಾಗೃಹ ಸೀಲ್‍ಡೌನ್ ಮುಕ್ತವಾಗಿದೆ.

ಮಾರ್ಚ್ 22ರಂದು ಪಾದರಾಯನಪುರ ಗಲಭೆ ಪ್ರಕರಣದ 121 ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದರು. ಇದಾದ ಎರಡೇ ದಿನದಲ್ಲಿ ಅಲ್ಲಿದ್ದವರಲ್ಲಿ ಐವರಿಗೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ಮತ್ತೆ ವಾಪಸ್ ಬೆಂಗಳೂರಿಗೆ ಆರೋಪಿಗಳನ್ನು ಶಿಫ್ಟ್ ಮಾಡಲಾಗಿತ್ತು. ಅದಕ್ಕೂ ಮೊದಲು ರಾಮನಗರ ಜೈಲಿನಲ್ಲಿದ್ದ 177 ಮಂದಿ ವಿಚಾರಣಾಧೀನ ಖೈದಿಗಳು ಬೆಂಗಳೂರಿಗೆ ಶಿಫ್ಟ್ ಮಾಡಿದ್ದರು.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೂ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಲ್ಲಿನ ಖೈದಿಗಳನ್ನ ಕರೆತಂದರೆ ಮತ್ತೆ ಆತಂಕ ಮೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸತತ ನಾಲ್ಕು ತಿಂಗಳ ಬಳಿಕ ಇದೀಗ ಸೀಲ್‍ಡೌನ್ ಮುಕ್ತವಾದ ಕಾರಾಗೃಹಕ್ಕೆ ಹೊಸದಾಗಿ 5 ಮಂದಿ ಆರೋಪಿಗಳನ್ನು ಜೈಲಿನಲ್ಲಿ ಹಾಕಲಾಗಿದೆ.

Click to comment

Leave a Reply

Your email address will not be published. Required fields are marked *