ಬೆಳಗಾವಿ: ಕೊರೊನಾ ವೈರಸ್ ಭೀತಿಯಿಂದ ಹೇರಲಾಗಿದ್ದ ಲಾಕ್ ಡೌನ್ ಪರಿಣಾಮ ಹಲವಾರು ಮಂದಿ ದಿನಸಿ ಸಿಗದೆ ಸಂಕಷ್ಟಕ್ಕೀಡಾಗಿದ್ದಾರೆ. ಹಾಗೆಯೇ ಬೆಳಗಾವಿಯಲ್ಲಿ ಕೂಡ 87 ವರ್ಷದ ವೃದ್ಧೆಯೊಬ್ಬರು ಪಡಿತರಕ್ಕಾಗಿ ಕಣ್ಣೀರು ಹಾಕಿದ್ದಾರೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಬೆಳಗಾವಿಯಲ್ಲಿರುವ ಕಚೇರಿ ಎದುರು ವಡಗಾವಿ ನಿವಾಸಿ 87 ವರ್ಷದ ಅಜ್ಜಿ ಯಲ್ಲವ್ವ ಢವಳೇ ಕಣ್ಣೀರು ಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ವೃದ್ಧಾಪ್ಯ ವೇತನ ಕಟ್ ಆಗಿದೆ ಎಂದು ತನ್ನ ಅಲವತ್ತುಕೊಂಡಿದ್ದಾರೆ.
Advertisement
Advertisement
ನಿನ್ನೆ 2 ಸಾವಿರ ಆಹಾರ ಕಿಟ್ ವಿತರಣೆ ಮಾಡಿದ್ದು, ಇಂದು ಕೂಡ ಪಡಿತರ ಕೊಡುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಚಿವ ಸುರೇಶ ಅಂಗಡಿ ಕಚೇರಿ ಬಳಿ ಮತ್ತೆ ಜನ ಸಮೂಹ ಜಮಾವಣೆಗೊಂಡಿತ್ತು.
Advertisement
5 ಸಾವಿರ ಕಿಟ್ ಬಂದಿವೇ ಎಂಬ ವದಂತಿ ಹಬ್ಬಿದ್ದು, ಬೆಳಗಾವಿ ಚೆನ್ನಮ್ಮ ವೃತ್ತದ ಬಳಿ ಇರೋ ಸಚಿವರ ಕಚೇರಿ ಬಳಿ ಇಂದು ಕೂಡ ಜನ ಆಹಾರ ಸಾಮಗ್ರಿ ಪಡೆಯಲು ಬಂದ ಬಂದಿದ್ದರು. ಅಲ್ಲದೆ ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೆಡೆ ಸೇರಿದ್ದರು. ನಿನ್ನೆಗಿಂದ ಇಂದು ಹೆಚ್ಚು ಜನ ಜಮಾವಣೆಗೊಂಡಿದ್ದರು.
Advertisement
ಕೊನೆಗೆ ಇದು ಸುಳ್ಳು ಸುದ್ದಿ ಎಂದು ತಿಳಿದ ಬಳಿಕ ಜನ ನಿರಾಶ ಭಾವನೆಯಿಂದ ವಾಪಸ್ಸಾಗಿದ್ದಾರೆ. 87 ವರ್ಷದ ಅಜ್ಜಿ ಕೂಡ ನಿರಾಸೆಗೊಂಡು ಹಿಂದಿರುಗಿದ್ದಾರೆ.