ಬೆಂಗಳೂರು: ಇನ್ನು ಮುಂದೆ ಕೊರೊನಾ ಪರೀಕ್ಷೆ ಮಾಡಿದ ಬಳಿಕ ಫಲಿತಾಂಶಕ್ಕಾಗಿ ಆರೋಗ್ಯ ಇಲಾಖೆಯ ಮಾಹಿತಿಗಾಗಿ ಕಾಯುವ ಅಗತ್ಯವಿಲ್ಲ. ನೀವೇ ಮನೆಯಲ್ಲಿ ಕುಳಿತುಕೊಂಡು ಪರೀಕ್ಷಾ ವರದಿಯನ್ನು ಚೆಕ್ ಮಾಡಬಹುದು.
ಎಸ್.ಆರ್.ಎಫ್ ಐಡಿಯಿಂದ ತಮ್ಮ ಮೊಬೈಲ್ನಲ್ಲೇ ಕೊರೊನಾ ವರದಿ ಪಡೆಯುವ ವ್ಯವಸ್ಥೆಯಲ್ಲಿ ಆರೋಗ್ಯ ಇಲಾಖೆ ಮಾಡಿದೆ.
Advertisement
Advertisement
ಈ ಮುಂಚೆ ಕೊರೊನಾ ಪರೀಕ್ಷೆ ನಡೆದ ನಂತರ ವರದಿಗಾಗಿ ಅಧಿಕಾರಿಗಳ ಫೋನ್ ಕರೆಗೆ ಕಾಯಬೇಕಿತ್ತು ಅಥವಾ ಆರೋಗ್ಯ ಇಲಾಖೆ ಕಳುಹಿಸುವ ಸಂದೇಶವನ್ನು ನಿರೀಕ್ಷಿಸಬೇಕಿತ್ತು. ಆದರೆ ಈಗ ಪರೀಕ್ಷೆ ವೇಳೆ ನೀಡಿದ ಮೊಬೈಲ್ ನಂಬರ್ ಗೆ ಬರುವ ಎಸ್.ಆರ್.ಎಫ್ ಐಡಿಯನ್ನು ಆರೋಗ್ಯ ಇಲಾಖೆ ನೀಡಿದ ಪೋರ್ಟಲ್ಗೆ ಹೋಗಿ ನಮೂದಿಸಿದರೆ ಕ್ಷಣಾರ್ಧದಲ್ಲಿ ರಿಸಲ್ಟ್ ಗೊತ್ತಾಗುತ್ತೆ.
Advertisement
Advertisement
https://www.covidwar.karnataka.gov.in/service1 ಈ ವೆಬ್ಸೈಟಿಗೆ ಹೋಗಿ ಅಲ್ಲಿ ನಿಮ್ಮ ಮೊಬೈಲ್ಗೆ ಬಂದಿರುವ ಎಸ್.ಆರ್.ಎಫ್ ಐಡಿ ಕೊಟ್ಟರೆ ನಿಮ್ಮ ಕೊರೊನಾ ವರದಿಯನ್ನು ನೀವು ನಿಮ್ಮ ಮೊಬೈಲ್ನಲ್ಲೇ ನೋಡಬಹುದು. ರಿಸಲ್ಟ್ ಪಾಸಿಟಿವ್ ಬಂದರೂ ಆತಂಕ ಪಡದೇ ಮನೆಯಲ್ಲೇ ಐಸೊಲೇಶನ್ ಆಗಬೇಕು. ನಂತರ ಆರೋಗ್ಯಾಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.