ಬೆಂಗಳೂರು: ಎನ್ಸಿಬಿಯಿಂದ ಡ್ರಗ್ ಪೆಡ್ಲರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಸಿಡಿಸಿದ್ದ ಬಾಂಬ್ಗೆ ಕೊನೆಗೂ ಬೆಂಗಳೂರು ಸಿಸಿಬಿ ಎಚ್ಚೆತ್ತುಕೊಂಡಿದೆ.
ನಿರ್ದೇಶಕ ಇಂದ್ರಜೀತ್ ಲಂಕೇಶ್ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಇಂದ್ರಜೀತ್ ಲಂಕೇಶ್ ಹೇಳಿಕೆ ನೀಡಿದ್ದರು. ಹೀಗಾಗಿ ಸಿಸಿಬಿ ಅಧಿಕಾರಿಗಳನ್ನ ಭೇಟಿ ಮಾಡಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಮಾಫಿಯಾದಿಂದ ಮರ್ಸಿಡಿಸ್, ಜಾಗ್ವಾರ್ ಕಾರು ಪಡೆದ ಕಲಾವಿದರ ಹೆಸರು ಬಹಿರಂಗವಾಗ್ಬೇಕು: ಇಂದ್ರಜಿತ್
Advertisement
Advertisement
ಅಷ್ಟೇ ಅಲ್ಲದೇ ಇಂದ್ರಜಿತ್ ಲಂಕೇಶ್ ಅವರಿಗೆ ಸೋಮವಾರ ಈ ಬಗ್ಗೆ ಮಾಹಿತಿ ನೀಡಲು ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಸಹಕರಿಸಲು ಮನವಿ ಮಾಡಿಕೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ನೀಡುವ ಮಾಹಿತಿ ಆಧರಿಸಿ ತನಿಖೆ ಮಾಡುವ ಬಗ್ಗೆ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಇಂದ್ರಜಿತ್ ಅವರು, ಮೂರನೇ ಪೀಳಿಗೆಯ ಮತ್ತು ಇತ್ತೀಚಿಗೆ ಬಂದ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿತ್ತು. ಎಲ್ಲಿ ಎಲ್ಲಿ ಯಾವ ಯಾವ ತೋಟದಲ್ಲಿ, ರೆಸಾರ್ಟಿನಲ್ಲಿ ಮತ್ತು ರಾಜಕಾರಣಿಗಳ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಎಲ್ಲ ಗೊತ್ತಿತ್ತು ಎಂದು ಹೇಳಿದ್ದರು.
ಹಿರಿಯ ನಟರು ಮತ್ತು ನಿರ್ಮಾಪಕರು ಈ ವಿಚಾರದ ಬಗ್ಗೆ ಮಾತನಾಡಿ ಶಾಕ್ ಆಗಿದ್ದು ಉಂಟು. ಇದರ ಬಗ್ಗೆ ಹಿರಿಯ ನಟರಾದ ನನ್ನ ಸ್ನೇಹಿತರು ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಇವತ್ತು ಮೀಡಿಯಾ ಮುಂದೆ ಬರಲು ಕಾರಣ ಸುದ್ದಿವಾಹಿನಿಯಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ಮಾಫಿಯಾದಲ್ಲಿ ಇದೆ ಎಂದು ತೋರಿಸುತ್ತಿರುವುದು ನನಗೆ ನೋವಾಗಿದೆ. ಇದರಲ್ಲಿ ಪೂರ್ತಿ ಚಿತ್ರರಂಗವಿಲ್ಲ. ಇದರಲಿಲ್ಲ ಮೂರನೇ ಪೀಳಿಗೆಯ ನಟ-ನಟಿಯರು, ಹಿರಿಯ ನಿರ್ದೇಶಕರ ಮಕ್ಕಳು, ಹಿರಿಯ ನಟರ ಮಕ್ಕಳು ಮತ್ತು ರಾಜಕಾರಣಿಗಳ ಮಕ್ಕಳು ದುಡ್ಡು ಇರುವವರು ಭಾಗಿಯಾಗಿದ್ದಾರೆ ಎಂದಿದ್ದರು.