ಜೈಪುರ್: ವ್ಯಕ್ತಿಯೊಬ್ಬ ಆಹಾರ ಸಿಗದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನೇ ತಿಂದ ಮನಕಲುಕುವ ಘಟನೆ ರಾಜಸ್ಥಾನದ ಜೈಪುರ್ನಲ್ಲಿ ನಡೆದಿದೆ.
ವ್ಯಕ್ತಿ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಎಲ್ಲಿ ಘಟನೆ ನಡೆದಿದೆ ಎನ್ನುವುದು ಸ್ಪಷ್ಟವಾಗದಿದ್ದರೂ ಜೈಪುರ್-ದೆಹಲಿ ಹೆದ್ದಾರಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.
Advertisement
Advertisement
ತಿನ್ನಲು ಆಹಾರವಿಲ್ಲದೆ ಕಂಗಾಲಾಗಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಾಯಿಯ ಮಾಂಸವನ್ನು ತಿನ್ನುತ್ತಿದ್ದ. ಈ ವೇಳೆ ಇದೇ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಇದನ್ನು ನೋಡಿ ಕಾರ್ ನಿಲ್ಲಿಸಿ, “ಏಯ್ ಏನ್ ತಿಂದಾ ಇದ್ದೀಯಾ? ಅದು ಸತ್ತು ಹೋಗಿದೆ. ಅದನ್ನು ಬಿಟ್ಟು ಮುಂದೆ ಕಾಣಿಸುತ್ತಲ್ಲಾ ಆ ಅಂಗಡಿ ಕಡೆಗೆ ಬಾ ನಿನಗೆ ಆಹಾರ ಕೊಡಿಸುತ್ತೇನೆ” ಎನ್ನುತ್ತಾರೆ.
Advertisement
ಸಮೀಪದ ಹೋಟೆಲ್ನಲ್ಲಿ ಆಹಾರ ತಂದು ಕೊಟ್ಟಾಗ ವ್ಯಕ್ತಿ ಖುಷಿ ವ್ಯಕ್ತಪಡಿಸಿದ. ಬಳಿಕ ರಸ್ತೆಯಲ್ಲೇ ಕುಳಿತು ಸಿಕ್ಕ ಅನ್ನವನ್ನು ತಿಂದು ಹಸಿವು ನೀಗಿಸಿಕೊಂಡಿದ್ದಾನೆ. ಆಹಾರ ನೀಡಿ ಎಲ್ಲ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿಯು ಇದು ದೆಹಲಿ-ಜೈಪುರ್ ಹೆದ್ದಾರಿಯಾಗಿದ್ದು, ಘಟನೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement
A heartbreaking video from #DelhiJaipur highway, a man who wasn't having food, was eating a dead dog.@yogitabhayana @India_NHRC @ashokgehlot51 @SachinPilot @DC_Gurugram @JaipurCongress#heartbroken #poor #MigrantsOnTheRoad pic.twitter.com/hW6eaMl18M
— Ananya Bhatnagar (@anany_b) May 20, 2020
ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಕೊರೊನಾ ವೈರಸ್ ಲಾಕ್ಡೌನ್ ಮಧ್ಯೆ ಭಾರತದ ಹೆದ್ದಾರಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಜೀವನ, ಸವಾಲುಗಳಿಗೆ ಈ ದೃಶ್ಯ ಸಾಕ್ಷಿಯಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.